ಒಲೆಗೆ ಬೆಂಕಿ ಹಚ್ಚಲು ತೆರಳಿದ ವೇಳೆ ಬುಸ್ ಗುಟ್ಟಿದ ಕಾಳಿಂಗ: ಬಚ್ಚಲು ಮನೆಯ ಒಲೆಯ ಒಳಡೆ ಇತ್ತು ಬೃಹತ್ ಕೋಬ್ರಾ

ಶಿರಸಿ: ವ್ಯಕ್ತಿಯೋರ್ವರ ಬಚ್ಚಲು ಮನೆಯ ಒಲೆಯ ಒಳಗಡೆ ಅವಿತು ಕುಳಿತಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞ ಹಾಗೂ ಅರಣ್ಯ ಸಿಬ್ಬಂದಿಗಳ ಸಹಾಯದಲ್ಲಿ ಹಿಡಿದು ಕಾಡಿಗೆ ಬಿಟ್ಟ ಘಟನೆ ಶಿರಸಿ ತಾಲೂಕಿನ ಮತ್ತಿಘಟ್ಟಾದಲ್ಲಿ ನಡೆದಿದೆ. ಮತ್ತಿಘಟ್ಟಾದ ಅಣ್ಣಪ್ಪ ಗೌಡ ಎನ್ನುವವರ ಬಚ್ಚಲು ಮನೆಯಲ್ಲಿ ನೀರು ಕಾಯಿಸುವ ಒಲೆಯ ಒಳಗಡೆ ಕಾಳಿಂಗ ಸರ್ಪ ಅಡಗಿ ಕುಳಿತಿತ್ತು .

ಒಲೆಗೆ ಬೆಂಕಿ ಹಾಕುವ ವೇಳೆಗೆ ಹಾವು ಬುಸುಗುಟ್ಟುವುದನ್ನು ಕೇಳಿದ ಮನೆಯವರು ಕೂಡಲೇ ಉರಗ ತಜ್ಞ ಮಾಝ್ ಸೈಯ್ಯದ್ ಎನ್ನುವವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಹಾಗೂ ಜಾನ್ಮನೆ ವಿಭಾಗದ ಅರಣ್ಯ ಸಿಬ್ಬಂದಿಗಳ ಸಹಾಯದಲ್ಲಿ ಕಾಳಿಗ ಸರ್ಪವನ್ನು ಸುರಕ್ಷಿತವಾಗು ಹಿಡಿದು ಕಾಡಿಗೆ ಬಿಡಲಾಯಿತು.

ವಿಸ್ಮಯ ನ್ಯೂಸ್, ಶಿರಸಿ

Exit mobile version