ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ
![](http://i0.wp.com/vismaya24x7.com/wp-content/uploads/2025/02/bgs.jpg?fit=1280%2C720&ssl=1)
ಕುಮಟಾ: ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಶಾಖಾಮಠದ ಪೂಜ್ಯರಾದ ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ, ಮಿರ್ಜಾನ್ ಶಾಖಾ ಮಠದ ಪೂಜ್ಯರಾದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಯವರ ಮಾರ್ಗದರ್ಶನದೊಂದಿಗೆ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 16/2/2025 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ವಿಷಯಗಳು- ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ, ರಾಜ್ಯಾಡಳಿತ ಮತ್ತು ಸಂವಿಧಾನ, ಇತಿಹಾಸ ಮತ್ತು ಭೂಗೋಳಶಾಸ್ತ್ರ, ವಿಜ್ಞಾನ ತಂತ್ರಜ್ಞಾನ, ಕ್ರೀಡೆ, ಮನರಂಜನೆ ಹಾಗೂ ಪ್ರಚಲಿತ ವಿದ್ಯಮಾನಗಳು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರಿಗೆ 10,000 ರುಪಾಯಿ,ಟ್ರೋಫಿ ಹಾಗೂ ಬೆಳ್ಳಿಯ ಪದಕ .ದ್ವಿತೀಯ ಬಹುಮಾನ ಬಂದವರಿಗೆ 7,000 ರೂಪಾಯಿ, ಟ್ರೋಫಿ ಬೆಳ್ಳಿಯ ಪದಕ ತೃತೀಯ ಸ್ಥಾನ ಗಳಿಸಿದವರಿಗೆ 5000 ರೂಪಾಯಿ, ಟ್ರೋಫಿ ಬೆಳ್ಳಿಯ ಪದಕ ಹಾಗೂ 4,5,6 ನೇ ಸ್ಥಾನ ಗಳಿಸಿದವರಿಗೆ ಎರಡು ಸಾವಿರ ರೂಪಾಯಿಯ ಜೊತೆಗೆ ಪ್ರತಿಯೊಬ್ಬರಿಗೂ ಬೆಳ್ಳಿಯ ಪದಕವನ್ನು ಬಹುಮಾನವಾಗಿ ನೀಡಲಾಗುತ್ತದೆ.
ಕೊನೆಯಲ್ಲಿ ಅಧಿಕ ಅಂಕಗಳಿಸಿದ 50 ಗುಂಪುಗಳಿಗೆ ಬೆಳ್ಳಿಯ ಪದಕ ಬಹುಮಾನವಾಗಿ ನೀಡಲಾಗುತ್ತದೆ. ಅಂದು ನಡೆಯುವ ಸ್ಪರ್ಧೆಗೆ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳುಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.
ವಿಸ್ಮಯ ನ್ಯೂಸ್, ಕುಮಟಾ
![](http://i0.wp.com/vismaya24x7.com/wp-content/uploads/2023/07/hegde-aye-hospital-web-1.jpg?resize=708%2C398&ssl=1)