Important
Trending
ಪುರಾಣ ಪ್ರಸಿದ್ಧ ಯಾಣದಲ್ಲಿ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ: ಭೈರವೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಸಮಯದಲ್ಲಿ ಕೊಂಚ ಬದಲಾವಣೆ

ಕುಮಟಾ: ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಯಾಣದಲ್ಲಿ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು , ಈ ವೇಳೆ ಮೂರ್ನಾಲ್ಕು ಪ್ರವಾಸಿಗರು ಹೆಜ್ಜೇನು ಕಡಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಕುಮಟಾ ತಾಲೂಕಾಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಹೀಗಾಗಿ ಜೇನು ದಾಳಿಯಿಂದ ಭಕ್ತರಿಗೆ ತೊಂದರೆಯಾಗದoತೆ ಶ್ರೀ ಭೈರವೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಸಮಯದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.
ತಾಲೂಕಿನ ಪುರಾಣ ಪ್ರಸಿದ್ಧ ತಾಣ ಶ್ರೀಕ್ಷೇತ್ರ ಯಾಣ ಪರಶಿವ ನೆಲೆಸಿರುವ ಈ ಪುಣ್ಯ ಕ್ಷೇತ್ರಕ್ಕೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಚಾರಣ ಪ್ರೀಯರಂತೂ ಈ ಕ್ಷೇತ್ರಕ್ಕೆ ಬಂದ ಮೇಲೆ ಶಿಖರದತ್ತ ಚಾರಣ ನಡೆಸಿ, ಸಕ್ಕತ್ ಏಂಜಾಯ್ ಮಾಡುತ್ತಾರೆ, ಈ ಶಿಖರದಲ್ಲಿ ಹಲವಾರು ಜೇನು ಗೂಡುಗಳು ಕಾಣ ಸಿಗುವುದು ಸಾಮಾನ್ಯವಾಗಿದೆ. ಶನಿವಾರ ಯಾರೂ ಪ್ರವಾಸಿಗರು ಮಾಡಿದ ಕಿಟಲೆಯಿಂದಲೇ ಹೆಚ್ಚೇನು ಹುಳುಗಳ ತಂಡ ದಂಡೆತ್ತಿ ಬಂದು ನೂರಾರು ಪ್ರವಾಸಿಗರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ