Important
Trending

ಪದ್ಮಶ್ರೀ ಸುಕ್ರಿ ಗೌಡ ವಿಧಿವಶ : ಹಾಡು ಮುಗಿಸಿದ ಜಾನಪದ ಕೋಗಿಲೆ

ಅಂಕೋಲಾ : ಜಾನಪದ ಹಾಡುಗಳ ಮೂಲಕ ಪ್ರಸಿದ್ಧಿಯಾಗಿದ್ದ ತಾಲೂಕಿನ ಬಡಗೇರಿಯ ಸುಕ್ರಿ ಗೌಡ ವಿಧವಶರಾಗಿದ್ದಾರೆ. ಆಗಾಗ ಕಾಣಿಸಿಕೊಳ್ಳುತ್ತಿದ್ದ ಆರೋಗ್ಯ ಏರು ಪೇರಿನ ಸಮಸ್ಯೆಯಿಂದ ಬಳಲಿದ್ದ ಅವರನ್ನು ಪಕ್ಕದ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲು ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ಕುಟುಂಬದವರು ಶಾಸಕ ಸತೀಶ ಸೈಲ್ ಅವರ ವಿಶೇಷ ನೆರವಿನೊಂದಿಗೆ ಪ್ರಯತ್ನಸಿದ್ದು , ಬಳಿಕ ಮನೆಗೆ ಮರಳಿ ಕರೆ ತರಲಾಗಿದ್ದ ಸುಕ್ರಜ್ಜಿ ಗುರುವಾರ ಬೆಳಗಿನ ಜಾವ 3.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದು, ಇನ್ನು ನೆನಪು ಮಾತ್ರ ಎನ್ನುವಂತಾಗಿದೆ.

ನೂರಾರು ಹಾಡನ್ನು ಕಂಠಸ್ತ ಮಾಡಿಕೊಂಡು ಜತನವಾಗ್ಗಿಟ್ಟುಕೊಂಡು ಇನ್ನು ಕೆಲವನ್ನು ತಾವೇ ತಕ್ಷಣ ಕಟ್ಟಿ ಹಾಡುತ್ತಿದ್ದ ಸುಕ್ರಿ ಗೌಡ ಜಾನಪದ ಕೋಗಿಲೆ ಎಂದೇ ಗುರುತಿಸಿಕೊಂಡಿದ್ದರು.ದೇಶೀಯ ಜಾನಪದದ ದಂತ ಕಥೆಯೇ ಆಗಿದ್ದ ಸುಕ್ರಿ ತನ್ನೂರು ಬಡಗೇರಿಯ ಹಾಗೂ ತಾಲೂಕಿನ ಕೀರ್ತಿ ಬಾನೆತ್ತರಕ್ಕೆ ಕೊಂಡಯ್ದಿದ್ದರು.

ಪುಗಡಿ ತರ್ಲೆ ಮುಂತಾದ ಹಾಲಕ್ಕಿಗಳ ಮತ್ತು ಜಿಲ್ಲೆಯ ಜನಪದ ಲೋಕದ ಸಾಧಕಿ ಆಗಿದ್ದ ಇವಳ ಪ್ರತಿಭೆಗೆ ಸಾವಿರಾರು ಸನ್ಮಾನ ಗೌರವಗಳ ಜೊತೆ ರಾಷ್ಟ್ರದ ಉನ್ನತ ನಾಗರಿಕ ಗೌರವ ಪದ್ಮಶ್ರೀ ಪುರಸ್ಕಾರ ಒಲಿದು ಬಂದಿತ್ತು.ಅಲ್ಲದೇ ಈ ಭಾಗದ ಜನಪದ ಸಾಮಾಜಿಕ ಹೋರಾಟದ ಐಕಾನ್ ಆಗಿದ್ದ ಸುಕ್ರಿ ಗೌಡ, ಗಾಂಧೀಜಿ ದಾರಿಯಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣದ ಕನಸಿನಿಂದ ಮದ್ಯಪಾನ ವಿರೋಧಿ ಹೋರಾಟದಲ್ಲಿ ಬಹುತೇಕ ಯಶಸ್ಸು ನೀಡಿದ್ದರು.

ಕೆಲ ತಿಂಗಳ ಹಿಂದಷ್ಟೇ ಪದ್ಮಶ್ರೀ ತುಳಸೀ ಗೌಡ ಅವರನ್ನು ಕಳೆದುಕೊಂಡಿದ್ದ ಜಿಲ್ಲೆ ಮತ್ತು ನಾಡು ಈಗ ಸುಕ್ರಿ ಗೌಡರನ್ನು ಕಳೆದುಕೊಳ್ಳುವ ಮೂಲಕ ಹೀಗೆ ಎರಡು ಪದ್ಮಶ್ರೀ ಪುರಸ್ಕೃತರನ್ನು ಕಳೆದ ಕೊಂಡು ವಾಸ್ತವದಲ್ಲಿ ಬಡವಾಗಿದೆ .

ಅಗಲಿದ ಹಿರಿಯ ಚೇತನಕ್ಕೆ ದೇವರು ಚಿರಶಾಂತಿ ನೀಡಲಿ ಎನ್ನುವುದು ಹಲವರ ಪ್ರಾರ್ಥನೆಯಾಗಿದ್ದು, ಫೆ 13 ರ ಗುರುವಾರ ಮಧ್ಯಾಹ್ನ 12.30 ರ ನಂತರ ಅಂಕೋಲಾದ ಬಡಗೇರಿಯಲ್ಲಿ ಮೃತರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆ ಯಲಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button