Big News
Trending

ಗೋಕರ್ಣ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ

ಹೇಗಿದೆ ನೋಡಿ ಡ್ರೆಸ್ ಕೋಡ್

ಜೀನ್ಸ್, ಶರ್ಟ್ ಧರಿಸಿದವರಿಗೆ ಇನ್ನಿಲ್ಲ ಪೂಜೆಗೆ ಅವಕಾಶ
ಮಹಿಳೆಯರಿಗೂ ಇದೆ ವಸ್ತ್ರ ಸಂಹಿತೆ

ಗೋಕರ್ಣ: ಪುರಾಣ ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಪುರುಷ ಭಕ್ತರು ಧೋತಿ ಅಥವಾ ಲುಂಗಿ ಧರಸಿರಬೇಕು. ದೇವಾಲಯ ಒಳ ಪ್ರವೇಶಿಸುವಾಗ ಶರ್ಟ್ (ಅಂಗಿ) ತೆಗೆಯಬೇಕು. ಪ್ಯಾಂಟ್, ಬರ್ಮುಡಾ, ಅರ್ಧ ಪ್ಯಾಂಟ್ ಧರಿಸುವಂತಿಲ್ಲ.
ಮಹಿಳೆಯರು ಸೀರೆ, ಚೂಡಿದಾರ ಅಥವಾ ಲಂಗ, ಶಲ್ಯವನ್ನು ಧರಿಸಿರಬೇಕು. ಅರ್ಧ ಪ್ಯಾಂಟ್, ಬರ್ಮುಡಾ, ಸ್ಕರ್ಟ್ ಅನ್ನು ಧರಿಸಿ ಬಂದರೆ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.

ಭಾರತೀಯ ಉಡುಗೆಯೊಂದಿಗೆ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆಯಲು ದೇವಾಲಯದ ಆಡಳಿತ ಭಕ್ತರಲ್ಲಿ ವಿನಂತಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.

ಅಕ್ರಮ ಮರಳು ಅಡ್ಡೆ ಮೇಲೆ ದಾಳಿ

ಜೊಯಿಡಾ: ತಾಲೂಕಿನ ರಾಮನಗರದ ವೈಜಗಾಂವ, ಶಿಂಗರಗಾಂವ, ಕೂಡಲಗಾಂವ, ಆಮಶೇತ. ಗ್ರಾಮಗಳಲ್ಲಿ ಅರಣ್ಯ ಮತ್ತು ಮಾಲ್ಕಿ ಜಮೀನುಗಳಲ್ಲಿ ಸಂಗ್ರಹಿಸಿದ್ದ ಲಕ್ಷಾಂತರ ಮೌಲ್ಯದ ಸುಮಾರು 42 ಬರಾಸ್ (120 ಕ್ಯೂಬಿಕ್ ಮೀಟರ್) ಮರಳನ್ನು ಜೊಯಿಡಾ ತಹಸಿಲ್ದಾರ ಸಂಜಯ ಕಾಂಬಳೆ ನೇತೃತ್ವದ ತಂಡ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ಮರಳನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ.


ಈ ದಾಳಿಯ ಸಂದರ್ಬದಲ್ಲಿ ಜೊಯಿಡಾ ತಹಸಿಲ್ದಾರ ಸಂಜಯ ಕಾಂಬಳೆ,ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ ಮೋರೆ, ಜಗಲಬೇಟ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಲಮಾಣಿ ಮುಂತಾದವರಿದ್ದರು.

Related Articles

Back to top button