Follow Us On

Google News
Uttara Kannada
Trending

ಕುಮಟಾ ತಾಲೂಕಿನಲ್ಲಿ ಇಂದು ಕರೊನಾ ಆರ್ಭಟ : 42 ಕೇಸ್ ದಾಖಲು

  • ಕುಮಟಾ ತಾಲೂಕಿನಲ್ಲಿ ಇಂದು ಹೆಚ್ಚಿನ ಕರೊನಾ ಸೋಂಕು
  • ಮಾದನಗೇರಿ, ಚಿತ್ರಗಿ, ಬೆಟ್ಗೇರಿ, ದೇವರಹಕ್ಕಲ, ಹೆಗಡೆ, ಬಸ್ತಿಪೇಟೆ, ಉಪ್ಪಿನ ಪಟ್ಟಣ, ವಾಲಗಳ್ಳಿ, ಅಂತ್ರವಳ್ಳಿ ಸೇರಿದಂತೆ ಹಲವೆಡೆ ಸೋಂಕು ದೃಢ
  • ಹೊನ್ನಾವರ ತಾಲೂಕಿನಲ್ಲಿ ಇಂದು ಐದು ಪಾಸಿಟಿವ್
[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಕರೊನಾ ಅಬ್ಬರಿಸಿದ್ದು, ಬರೋಬ್ಬರಿ 42 ಸೋಂಕಿತ ಪ್ರಕರಣ ದಾಖಲಾಗಿದೆ. ಹೆರವಟ್ಟಾದಲ್ಲಿ 6, ಹೊಸಹೆರವಟ್ಟಾ 3, ಮಾದನಗೇರಿ 3, ಚಿತ್ರಗಿ 2, ಬೆಟ್ಗೇರಿ 2, ಹಳಕಾರ ಮದ್ಗುಣಿ 2, ದೇವರಹಕ್ಕಲ 5, ಹೆಗಡೆ ಚಿಟ್ಟೆಕಂಬಿ 4, ಹೆಗಡೆ 3, ಭಸ್ತಿಪೇಟೆ 2 ಸೇರಿದಂತೆ ಉಪ್ಪಿನ ಪಟ್ಟಣ, ಗುಜರಗಲ್ಲಿ, ಕಾಗಲ್‌ಮಾನೀರ್, ವಾಲಗಳ್ಳಿ, ಮಣ್ಕಿ, ಹಿರೇಗುತ್ತಿ, ಅಂತ್ರವಳ್ಳಿ ಸೇರಿದಂತೆ ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ.

ಹೆರವಟ್ಟಾದ 45 ವರ್ಷದ ಪುರುಷ, 45 ವರ್ಷದ ಇಬ್ಬರು ಮಹಿಳೆ, 53 ವರ್ಷದ ಪುರುಷ, 29 ವರ್ಷದ ಯುವಕ, 32 ವರ್ಷದ ಪುರುಷ, ಗಾಂಧಿನಗರದ 67 ವರ್ಷದ ವೃದ್ಧ, ಮಾದನಗೇರಿಯ 72 ವರ್ಷದ ವೃದ್ಧ, 37 ವರ್ಷದ ಪುರುಷ, 40 ವರ್ಷದ ಪುರುಷ, ಹೊಸಹೆರವಟ್ಟಾದ 70 ವರ್ಷದ ವೃದ್ಧೆ, 80 ವರ್ಷದ ವೃದ್ಧೆ, 58 ವರ್ಷದ ಪುರುಷ, ಮಣ್ಕಿಯ 50 ವರ್ಷದ ಪುರುಷ, ವಾಲಗಳ್ಳಿಯ 30 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಚಿತ್ರಗಿಯ 42 ವರ್ಷದ ಪುರುಷ, 30 ವರ್ಷದ ಮಹಿಳೆ, ಹಣ್ಣೆಮಠದ 72 ವರ್ಷದ ವೃದ್ಧೆ, ಭಸ್ತಿಪೇಟೆಯ 65 ವರ್ಷದ ಪುರುಷ, 32 ವರ್ಷದ ಪುರುಷ, ಹಿರೇಗುತ್ತಿಯ 33 ವರ್ಷದ ಪುರುಷ, ಅಂತ್ರವಳ್ಳಿಯ 41 ವರ್ಷದ ಪುರುಷ, ತೋರ್ಕೆ ದೇವರಬಾವಿಯ 60 ವರ್ಷದ ಪುರುಷ, ಹಳಕಾರ ಮದ್ಗುಣಿಯ 45 ವರ್ಷದ ಪುರುಷ, 39 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.

ಬೆಟ್ಗೇರಿಯ 78 ವರ್ಷದ ವೃದ್ಧೆ, 81 ವರ್ಷದ ವೃದ್ಧ, ದೇವರಹಕ್ಕಲದ 51 ವರ್ಷದ ಪುರುಷ, 41 ವರ್ಷದ ಮಹಿಳೆ, 62 ವರ್ಷದ ಮಹಿಳೆ, 49 ವರ್ಷದ ಮಹಿಳೆ, 55 ವರ್ಷದ ಮಹಿಳೆ, ಉಪ್ಪಿನಪಟ್ಟಣದ 60 ವರ್ಷದ ಮಹಿಳೆ, ಗುಜರಗಲ್ಲಿಯ 34 ವರ್ಷದ ಮಹಿಳೆ, ಹೆಗಡೆ ಚಿಟ್ಟೆಕಂಬಿಯ 30 ವರ್ಷದ ಮಹಿಳೆ, 7 ವರ್ಷದ ಬಾಲಕಿ, 4 ವರ್ಷದ ಮಗು, 1 ವರ್ಷದ ಮಗು, ಹೆಗಡೆಯ 67 ವರ್ಷದ ವೃದ್ಧ, 70 ವರ್ಷದ ವೃದ್ಧ, 42 ವರ್ಷದ ಪುರುಷ, ಕಾಗಲ್‌ಮಾನೀರ್‌ನ 35 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ..

ಇಂದು 42 ಪ್ರಕರಣ ದೃಢಪಟ್ಟ ಬೆನ್ನಲ್ಲೆ, ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 935 ಕ್ಕೆ ಏರಿಕೆಯಾಗಿದೆ.

ಹೊನ್ನಾವರ ತಾಲೂಕಿನಲ್ಲಿ ಇಂದು ಐದು ಪಾಸಿಟಿವ್:

ಹೊನ್ನಾವರ: ತಾಲೂಕಿನಲ್ಲಿ ಇಂದು ಐದು ಕರೊನಾ ಕೇಸ್ ದಾಖಲಾಗಿದೆ. ಗುಣವಂತೆ, ಕಡ್ನೀರ, ಚಂದಾವರ, ಪಟ್ಟಣದ ಬ್ಯಾಂಕ್ ಸಿಬ್ಬಂದಿ ಮತ್ತು ಮುರುಡೇಶ್ವರ ಭಾಗದಲ್ಲಿ ಸೋಂಕು ಪತ್ತೆಯಾಗಿದೆ.

ಹೊನ್ನಾವರದ ಬ್ಯಾಂಕ್‌ವೊoದರ 30 ವರ್ಷದ ಯುವಕ, ಗುಣವಂತೆಯ 48 ವರ್ಷದ ಪುರುಷ, ಕಡನ್ನೀರದ 50 ವರ್ಷದ ಪುರುಷ, ಚಂದಾವರದ 56 ವರ್ಷದ ಮಹಿಳೆ, ಮುರುಡೇಶ್ವರದ 62 ವರ್ಷದ ಮಹಿಳೆ ಸೇರಿದಂತೆ ಒಟ್ಟು 5 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ.


ತಾಲೂಕಾ ಆಸ್ಪತ್ರೆಯಲ್ಲಿ 22 ಜನರು ಚಿಕಿತ್ಸೆ ಪಡೆಯುತ್ತಿದ್ದು , 216 ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ಇಂದು 5 ಪ್ರಕರಣ ದೃಢಪಟ್ಟ ಬೆನ್ನಲ್ಲೆ, ಸೋಂಕಿತರ ಸಂಖ್ಯೆ 706 ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಮತ್ತು ಶ್ರೀಧರ್ ನಾಯ್ಕ ಹೊನ್ನಾವರ

Back to top button