Important
Trending

ಸಮುದ್ರ ತೀರದಲ್ಲಿ ತೇಲಿಬಂತು ಕಡವೆ ಮೃತದೇಹ

ಅಂತ್ಯಸoಸ್ಕಾರ ನೆರವೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಭಟ್ಕಳ: ಜಾಲಿ ಸಮುದ್ರ ತೀರದಲ್ಲಿ ಕಡವೆ ಮೃತ ದೇಹವೊಂದು ತೇಲಿ ಬಂದಿರುವ ಘಟನೆ ನಡೆದಿದೆ.  ಕಳೆದ ಒಂದುವಾರದಿಂದ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು. ಇದರಿಂದಾಗಿ ನದಿ, ಹಳ್ಳ,ಕೊಳ್ಳಗಳು ತುಂಬಿ ಹರಿಯುತ್ತಿದೆ. ಹೀಗಾಗಿ ಎಲ್ಲೋ ಸಾವನ್ನಪ್ಪಿದ ಕಡವೆ ನದಿಯಲ್ಲಿ ತೇಲಿ ಬಂದು ಸಮುದ್ರ ಸೇರಿದೆ. ಇಂದು  ಕಡವೆ ಮೃತದೇಹ ಜಾಲಿ ಭಾಗದ ಸಮುದ್ರದಲ್ಲಿ ತೇಲಿ ಬಂದು ದಡದಲ್ಲಿ ಪತ್ತೆಯಾಗಿದೆ.

ಶಾಲೆಯ ಕಟ್ಟಡ ಕುಸಿತ: ಅಪಾಯದಿಂದ ಪಾರಾದ ವಿದ್ಯಾರ್ಥಿಗಳು

ಈ ಬಗ್ಗೆ ಅಲ್ಲಿನ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ ಅಲ್ಲೇ ಸಮೀಪದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button