
ಕಾರವಾರ: ಕಳೆದ ವರ್ಷ ಮಳೆಗಾಲದ ಸಮಯದಲ್ಲಿ ಕಾರವಾರದ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹಳೆಯ ಕಾಳಿ ಸೇತುವೆ ರಾತ್ರೋ ರಾತ್ರಿ ಮುರಿದು ಬಿದ್ದು , ಸೇತುವೆ ಮೇಲೆ ಚಲಿಸುತ್ತಿದ್ದ ಲಾರಿ ಸಹ ನದಿಯಲ್ಲಿ ಮುಳುಗಡೆಯಾಗಿ, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದ ಘಟನೆ ನಡೆದಿತ್ತು. ಮುರಿದುಬಿದ್ದ ಸೇತುವೆಯ ತೆರವು ಮಾಡುವ ಕಾರ್ಯ ಕಳೆದ ನಾಲ್ಕೈದು ತಿಂಗಳಿoದ ಆರಂಭಿಸಲಾಗಿತ್ತು.
ತಡರಾತ್ರಿ ಏಕಾಏಕಿಯಾಗಿ ಸೇತುವೆಯ ಪಿಲ್ಲರ್ ಕೆಳಭಾಗ ಅರ್ಧ ತುಂಡಾಗಿದೆ. ಇದರಿಂದಾಗಿ ಸೇತುವೆ ಮೇಲ್ಮುಖವಾಗಿ ನಿಂತುಕೊoಡಿದೆ. ಒಂದು ವೇಳೆ ಈಗ ಮುರಿದ ಸೇತುವೆಯ ಭಾಗ ಹೊಸ ಸೇತುವೆಗೆ ಅಪ್ಪಳಿಸಿದ್ದರೆ, ಹೊಸ ಸೇತುವೆಗೂ ಸಹ ದೊಡ್ಡ ಮಟ್ಟದ ಅಪಾಯ ಉಂಟಾಗುತ್ತಿತ್ತು ಎನ್ನಲಾಗಿದೆ. ಅದೃಷ್ಟವಶಾತ್ ಇಂತಹ ಯಾವುದೇ ದುರ್ಘಟನೆ ಸಂಭವಿಸಿಲ್ಲ.
ವಿಸ್ಮಯ ನ್ಯೂಸ್, ಕಾರವಾರ