Important
Trending

ಗ್ರಾಮದೇವಿಗೆ 1.5 ಕೆಜಿ ತೂಕದ ಸ್ವರ್ಣ ಕಿರೀಟ: ಭಕ್ತರ ಬಹುವರ್ಷದ ಕನಸು ಈಡೇರಿಕೆ

ಯಲ್ಲಾಪುರ: ಪಟ್ಟಣದ ಗ್ರಾಮದೇವಿಯ ಭಕ್ತರ ಬಹುವರ್ಷಗಳ ಕನಸು ನನಸಾಗಿದ್ದು ಗ್ರಾಮದೇವಿಗೆ ಅಂದಾಜು 1.5 ಕೆಜಿ ತೂಕದ ಸ್ವರ್ಣ ಕಿರೀಟವನ್ನು ನೂರಾರು ಭಕ್ತರ ಸಮ್ಮುಖದಲ್ಲಿ ಸಮರ್ಪಿಸಲಾಯಿತು. ಇದಕ್ಕೂ ಮುನ್ನ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದು, ನಂತರ ಅನ್ನ ಸಂತರ್ಪಣಾ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ಆಗಮಿಸಿ ದೇವಿಗೆ ವಿಷೇಶ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್, ಅರ್ಚಕರು, ಸಾರ್ವಜನಿಕರು ಇದ್ದರು.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button