
ಕುಮಟಾ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಧಾರನಾಥ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಭಕ್ತರಿಗೆ ಸರಸತಿ ಸಾಲಿನಲ್ಲಿ ಬಂದು ದೇವರ ದರ್ಶನಕ್ಕೆ ಅನುವು ಮಾಡಲಾಗಿತ್ತು. ಈ ವೇಳೆ ಧಾರಾನಾಥ ದೇವಾಲಯದ ಮೋಕ್ತೆಸರರಾದ ಪ್ರಭುರವರು ಮಾತನಾಡಿ, ಪ್ರತಿ ವರ್ಷ ಮಹಾಶಿವರಾತ್ರಿಯ ಪ್ರಯುಕ್ತ ಧಾರಾನಾಥ ದೇವಾಲಯದಲ್ಲಿ 15 ರಿಂದ 20 ಸಾವಿರ ಜನರು ದಾರನಾಥನ ದರ್ಶನ ಪಡೆಯುತ್ತಾರೆ. ಈ ಬಾರಿ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಭಕ್ತರಿಗೆ ಮುಂಜಾನೆಯಿAದಲೇ ದೇವರ ದರ್ಶನಕ್ಕೆ ಅನುವು ಮಾಡಲಾಗುತ್ತದೆ. ಹಾಗೂ ಸರತಿ ಸಾಲಿನಲ್ಲಿ ಬರಲು ನೆರಳಿನ ವ್ಯವಸ್ಥೆ, ನೀರು ಹಾಗು ಪಾನಕದ ವ್ಯವಸ್ಥೆಯನ್ನು ಮಾಡಲಾಗಿದೆ. ಭಕ್ತರಿಗೆ ಯಾವುದೆ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ ಎಂದರು.
ಶ್ರೀ ಧಾರನಾಥ ದೇವಸ್ಥಾನದ ಸಮಿತಿಯ ಅದ್ಯಕ್ಷರಾದ ವಿ.ಕೆ ಭಟ್ರವರು ಮಾತನಾಡಿ, ಧಾರನಾಥ ದೇವಾಲಯವು ಗೋಕರ್ಣ ಮಂಡಲದ ಪಂಚಕ್ಷೇತ್ರಗಳಲ್ಲಿ ಒಂದು ಪ್ರಸಿದ್ದವಾದ ಸ್ಥಳ. ವರ್ಷದಿಂದ ವರ್ಷಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಶಿವರಾಥ್ರಿಯ ಈ ದಿನ ವಿಶೇಷ ಪೂಜೆ, ಅಭಿಷೇಕ, ಅರ್ಚನೆಗಳು ನಡೆಯುತ್ತಿದ್ದು, ಎಲ್ಲಾ ರಿತಿಯಿಂದಲೂ ಭಕ್ತರಿಗೆ ಅನುಕೂಲ ಮಾಡಲಾಗಿದೆ ಎಂದರು.
ಭಕ್ತರಾದ ಗಣಪತಿಯವರು ಮಾತನಾಡಿ, ಶಿವರಾತ್ರಿಯಂದು ಬೇರೆ ಬೇರೆ ಶಿವನ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇವೆ. ಇಂದು ಶ್ರಿ ಧಾರನಾಥನ ದೇವಾಲಯಕ್ಕೆ ಭೇಟಿ ನೀಡಿದ್ದು ತುಂಬಾ ಸಂತೋಷವೆನಿಸುತ್ತಿದೆ. ಸ್ವಚ್ಚತೆ, ಭಕ್ತತಾದಿಗಳಿಗೆ ನೆರಳಿನ ವ್ಯವಸ್ಥೆ, ಕುಡಿಯಲು ನೀರು ಹಾಗೂ ಪಾನಕದ ವ್ಯವಸ್ಥೆಯನ್ನು ದೇವಸ್ಥಾನದ ಸಂಘಟನೆ ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.
ಒಟ್ಟಾರೆ ಮಹಾಶಿವರಾತ್ರಿಯಂದು ಭಕ್ತರು ಹಣ್ಣು ಕಾಯಿ ಸಮರ್ಪಿಸಿ ಶಿವನನ್ನ ಭಕ್ತಿಯಿಂದ ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಲಿ ಎಂದು ಪ್ರಾರ್ಥಿಸಿಕೊಂಡರು.
ವಿಸ್ಮಯ ನ್ಯೂಸ್, ನಾಗೇಶ್ ದಿವಗಿ, ಕುಮಟಾ