Follow Us On

WhatsApp Group
Big News
Trending

ತೆಂಗಿನ ಚಿಪ್ಪಿನಲ್ಲಿ ಅರಳಿದೆ ಸುಂದರ ಕಲಾಕೃತಿ

ಕಲೆಯ ಸೆಳೆತಕ್ಕೆ ತಂದೆಯೇ ಪ್ರೇರಣೆ

ನಿರ್ಜೀವ ವಸ್ತುವಿಗೆ ಜೀವ ತುಂಬುತ್ತಿರುವ ಕಲಾವಿದ
ಗಮನ ಸೆಳೆಯುತ್ತಿವೆ ಪರಿಸರ ಸ್ನೇಹಿ ಸುಂದರ ಕಲಾಕೃತಿಗಳು

[sliders_pack id=”1487″]

ಕುಮಟಾ: ತೆಂಗಿನ ಕಾಯಿಯ ಚಿಪ್ಪೆಂದರೆ ಸಾಮನ್ಯವಾಗಿ ಅದು ಬೀಸಾಡಯವಂತಹ ವಸ್ತು ಅಥವಾ ಒಲೆಗೆ ಉರುವಲಾಗಿ ಬಳಸಿಕೊಳ್ಳುವಂತಹ ಒಂದು ವಸ್ತು. ಇನ್ನು ಕೆಲವರು ಬಿಕ್ಷೆ ಬೇಡುವ ಪದದಲ್ಲಿಯೂ ಕೂಡ ಗರಟೆಯನ್ನು ಕೀಳಾಗಿ ಬಳಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ಕಲಾವಿದರು ತೆಂಗಿನಕಾಯಿಯ ಗರಟೆಯನ್ನೇ ಬಳಸಿಕೊಂಡು ನೂರಾರು ಬಗೆಯ ಕಾಲಾಕೃತಿಗಳನ್ನು ರಚಿಸಿದ್ದಾರೆ. ಎಷ್ಟೆ ಸೂಕ್ಷ್ಮವಾಗಿ ಗಮನಿಸಿದರೂ ಸಹ ಇದು ನಿಜವಾಗಿಯೂ ತೆಂಗಿನಕಾಯಿಯಿಂದ ಮಾಡಿದಂತಹ ಕಲಾಕೃತಿಯೇ ಎಂದು ಯೋಚಿಸುವಂತೆ ಈ ಸುಂದರ ಕಲಾಕೃತಿಗಳು ನಿರ್ಮಾಣವಾಗಿವೆ. ತೆಂಗಿನಕಾಯಿ ಗರಟೆಯೊಂದೆ ಅಲ್ಲದೆ ನೈಸರ್ಗಿಕವಾಗಿಯೇ ನಿರ್ಮಾಣವಾದ ವಿವಿಧ ಪ್ರಾಣಿ, ಪಕ್ಷಿ, ದೇವರು, ಮನುಷ್ಯ ಮುಂತಾದವುಗಳನ್ನು ಹೊಲುವ ಮರದ ಬೇರಿನ ಸಂಗ್ರಹವು ಸಹ ಇವರಬಳಿ ಸಾಕಷ್ಟಿವೆ.

ಹೌದು.. ಕುಮಟಾ ತಾಲೂಕಿನ ಮೂರುರು ಗ್ರಾಮದ ಸಿದ್ಧರಮಠದ ಶಿವಮೂರ್ತಿ ಭಟ್ ರವರು ತೆಂಗಿನ ಚಿಪ್ಪಿನಲ್ಲಿ ಕೆತ್ತನೆಯ ವೈವಿಧ್ಯತೆ ಸಾಧಿಸಿ ಗಮನ ಸೆಳೆದಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಕಲೆಯೆಡೆಗೆ ಸೆಳೆತ ಹೊಂದಿದ್ದ ಶಿವಮೂರ್ತಿ ಭಟ್‍ರವರಿಗೆ ಖ್ಯಾತ ಕಲಾವಿದರಾದ ತಂದೆ ಸೂರ್ಯನಾರಾಯಣ ಭಟ್‍ರವರೇ ಪ್ರೇರಣೆ. ತಂದೆಯೊಡನೆ ಶಿಲೆಯಲ್ಲಿ ದೇವರ ಮೂರ್ತಿ ಹಾಗೂ ಇತರ ಕಲಾಕೃತಿಗಳನ್ನು ರಚಿಸುತ್ತಲೇ ಬೆಳೆದ ಶಿವಮೂರ್ತಿ ಭಟ್ ರವರು ಕೆಲ ವರ್ಷಗಳ ಹಿಂದೆ ಕೆತ್ತನೆಯಲ್ಲಿ ಅನ್ಯ ಮಾಧ್ಯಮಗಳ ಬಳಕೆಯತ್ತ ಆಕರ್ಷಿತರಾದರು. ಸಾಬೂನು, ಮರದ ಬೇರು, ಶಂಕ, ತೆಂಗಿನ ಗರಟೆ ಸೇರಿದಂತೆ ಇತರ ವ್ಯರ್ಥ ಸಾಮಗ್ರಿಗಳಲ್ಲೂ ಸಾಕಷ್ಟು ಕಲಾಕೃತಿಗಳನ್ನು ರಚಿಸಿಸತೊಡಗಿದರು. ಮರದ ಬೇರಿನಲ್ಲಿ ನೈಸರ್ಗಿಕವಾಗಿಯೇ ನಿರ್ಮಾಣವಾದ ಮೊಸಳೆ, ಆನೆ, ತಾಯಿ-ಮಗು, ಉಡ, ಮನುಷ್ಯನ ಮುಖ, ಕೋತಿ, ಪಕ್ಷಿ ಮುಂತಾದವುಗಳ ವಿವಿಧ ಆಕಾರಗಳನ್ನು ಹೋಲುವ ಬೇರಿನ ಕಲಾಕೃತಿಯ ದೊಡ್ಡ ಸಂಗ್ರಹವೇ ಇವರ ಬಳಿಯಿದೆ.

ತೆಂಗಿನ ಚಿಪ್ಪಿನಲ್ಲಿ ಗಣೇಶ ಮುರ್ತಿ, ಆಂಜನೇಯ, ಶಿಲಾಬಾಲಿಕೆ, ಹೂವಿನ ಕುಂಡ, ವಿವಿಧ ಪ್ರಾಣಿ ಪಕ್ಷಿಗಳು, ಸ್ಪ್ರಿಂಗ್, ಬಳೆ, ಹಾರ, ಕೀಟಗಳು, ವಿವಿಧ ಮನುಷ್ಯ ಕಲಾಕೃತಿ ಮುಂತಾದವುಗಳನ್ನು ರಚಿಸಿದ್ದಾರೆ. ಒಟ್ಟೂ 300ಕ್ಕೂ ಅಧಿಕ ಕಲಾಕೃತಿಗಳನ್ನು ಇವರು ಮಾಡಿದ್ದಾರೆ. ಕಲಾಕೃತಿ ರಚನೆ ಇವರಿಗೆ ಹವ್ಯಾಸವಗಿದ್ದು, ಸದ್ಯ ಮುರುರಿನ ಪ್ರಗತಿ ವಿದ್ಯಾಲಯದಲ್ಲಿ ಕಲಾ ಶಿಕ್ಷಕರಾಗಿ ಕೆಲಸಮಾಡುತ್ತಿದ್ದಾರೆ. ಈ ಸಂಬಂದ ನಮ್ಮ ವಿಸ್ಮಯ ಟಿ.ವಿ.ಯೊಂದಿಗೆ ಮಾತನಾಡಿರುವ ಶಿವಮೂರ್ತಿ ಭಟ್‍ರವರು, ಈ ಒಂದು ಹವ್ಯಾಸವನ್ನೇ ಮುಂದುವರೆಸಿಕೊಂಡು, ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ನಿವಾಸದಲ್ಲಿ ತರಬೇತಿ ಕೊಡಬೇಕೆಂಬ ವಿಚಾರವನ್ನು ಸಹ ಹೊಂದಿದ್ದೇನೆ ಎಂದು ಮಾಹಿತಿ ನೀಡಿದರು.

ಶಿವಮೂರ್ತಿ ಭಟ್‍ಅವರಿಗೆ ಒಲಿದಿರುವಂತಹ ಈ ಒಂದು ಕಲೆಯಿಂದ ಮುಂಬರುವ ದಿನಗಳಲ್ಲಿ ಕಲಾಕೃತಿ ರಚನೆಯಲ್ಲಿ ಆಸಕ್ತಿಯಿರುವ ವಿಧ್ಯಾರ್ಥಿಗಳಿಗೆ ಅನೂಕೂಲವಾಗಲಿ ಹಾಗೂ ಇವರ ಕಲೆಯನ್ನು ಸಂಬಂಧಪಟ್ಟ ಇಲಾಖೆ ಗುರುತಿಸಿ ಸಾಧಕರ ಪಟ್ಟಿಯಲ್ಲಿ ಇವರನ್ನು ಸೇರಿದಬೇಕೆಂಬುದು ನಮ್ಮ ಆಶಯವಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button