Important
Trending
ಬಸ್ ನಲ್ಲಿ ತೆರಳುವಾಗ ಚಿನ್ನಾಭರಣ, ಹಣವಿದ್ದ ಪರ್ಸ್ ಕಳೆದುಕೊಂಡಿದ್ದ ಶಿಕ್ಷಕಿ : ಪ್ರಾಮಾಣಿಕತೆ ಮೆರೆದ ನಿರ್ವಾಹಕ

ಸಿದ್ದಾಪುರ: ತಾಲೂಕಿನ ನೆಲಮಾವು ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿರಸಿಯ ಅನಿತಾ ಎನ್ನುವವರು ಶಿರಸಿ ಗೋಳಿಮಕ್ಕಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಚಿನ್ನದ ಬ್ರಾಸ್ ಲೈಟ್, ಅತ್ಯಮೂಲ್ಯ ದಾಖಲೆಗಳು ಮತ್ತು ನಗದು ಇದ್ದಿರುವ ತಮ್ಮ ಪರ್ಸನ್ನು ಕಳೆದುಕೊಂಡಿದ್ದರು.
ಅದೇ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ನಿರ್ವಾಹಕರಾದ ರವೀಂದ್ರ ದೊಡ್ಡಮನೆ ಇವರು ತಮಗೆ ಸಿಕ್ಕ ಪರ್ಸನ್ನು ಜೋಪಾನವಾಗಿರಿಸಿಕೊಂಡು ಸಾಯಂಕಾಲ ಕರ್ತವ್ಯ ಮುಗಿಸಿ ಬಂದು ಪರ್ಸ್ ಕಳೆದುಕೊಂಡಿದ್ದ ಶಿಕ್ಷಕರಿಗೆ ಬಸ್ ನಿಲ್ದಾಣದಲ್ಲಿಯೇ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಕಳೆದುಕೊಂಡ ಪರ್ಸನ್ನು ವಾಪಸ್ಸು ಪಡೆದ ಶಿಕ್ಷಕಿ ಅನಿತಾ ಅವರು ಸಾರಿಗೆ ಸಂಸ್ಥೆಯ ಈ ನಿರ್ವಾಹಕರ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್, ಸಿದ್ದಾಪುರ