Big News
Trending

ವಿಶ್ವವಿದ್ಯಾನಿಲಯಗಳ ರದ್ದುಗೊಳಿಸುವಿಕೆ ಶಿಕ್ಷಣ ಕ್ಷೇತ್ರಕ್ಕೆ ಮಾಡಿದ ಘೋರ ಅನ್ಯಾಯ: ರಾಜ್ಯಪಾಲರಿಗೆ ಮನವಿ

ಕುಮಟಾ: ಇಂದು ಬಿಜೆಪಿ ಪಕ್ಷದ ವತಿಯಿಂದ ರಾಜಭವನದಲ್ಲಿ ಘನವೆತ್ತ ರಾಜ್ಯಪಾಲ ರನ್ನು ಭೇಟಿಯಾಗಿ ಕರ್ನಾಟಕದ ಒಂಬತ್ತು ವಿಶ್ವವಿದ್ಯಾನಿಲಯಗಳನ್ನು ರದ್ದು ಮಾಡುವುದರ ವಿರುದ್ಧ ಶಿಕ್ಷಣ ಪ್ರಕೋಷ್ಟದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಂ ಎಲ್ ಸಿ ಗಳಾದ ಹಾಗೂ ಪ್ರಮುಖರುಗಳಾದ ಶ್ರೀ ರವಿಕುಮಾರ್, ಶ್ರೀ ಸುಶೀಲ್ ಕುಮಾರ್, ನಮೋಶಿ, ಶ್ರೀ ವಿ ಎಸ್ ಸಂಕನೂರು, ಶ್ರೀ ಅರುಣ್ ಶಂಕರಮೂರ್ತಿ, ಶಿಕ್ಷಣ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕ ಎಂಜಿ ಭಟ್, ಶಶಿಧರ್, ಡಾಕ್ಟರ್ ರಾಘವೇಂದ್ರ, ಹರೀಶ್ ಕೆ ಹಾಗೂ ಇತರರು ಇದ್ದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button