Important
Trending

ಅಪರಿಚಿತ, ಅನಾಥ ಶವಕ್ಕೆ ಸಮಾಜ ಸೇವಕರಿಂದ ಅಂತ್ಯಸಂಸ್ಕಾರ

ಭಟ್ಕಳ: ತಾಲೂಕಿನ ಅಳ್ವೆಕೊಡಿ ಸಮುದ್ರದಲ್ಲಿ ಸಿಕ್ಕ ಅಪರಿಚಿತ ವಶವನ್ನು ಹೆಬಳೆ ಪಂಚಾಯತ ಹಾಗೂ ಪೊಲೀಸರ ಸಹಾಯದಿಂದ ಸಮಾಜ ಸೇವೆಕ ಮಂಜು ಮುಟ್ಟಳ್ಳಿ ಹಾಗೂ ಆಂಬ್ಯುಲೆನ್ಸ್ ಚಾಲಕ ವಿನಾಯಕ ನಾಯ್ಕ ಮಣ್ಕುಳಿಯ ರುಧ್ರ ಭೂಮಿಯಲ್ಲಿ ಶವ ಸಂಸ್ಕಾರ ನೆರವೇರಿಸಿದರು.

ಕಳೆದ ಫೆ. 24 ರಂದು ಅಳ್ವೆಕೊಡಿ ಬಂದರನಲ್ಲಿ ಸುಮಾರು 50 ರಿಂದ 55 ವರ್ಷದ ಅಪರಿಚಿತ ಗಂಡಸಿನ ಶವ (ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ) ಭಟ್ಕಳದ ತೆಂಗಿನಗುಂಡಿ ಹತ್ತಿರದ ಅರಬ್ಬೀ ಸಮುದ್ರದಲ್ಲಿ ತೇಲುತ್ತಿರುವ ಶವವನ್ನು ಭಟ್ಕಳ ಕರಾವಳಿ ಕಾವಲು ಪೊಲೀಸ್ ಇಂಟರ್‌ಸೆಪ್ಪರ್ ಬೋಟ ಮೂಲಕ ಹಗ್ಗ ಕಟ್ಟಿ ಎಳೆದುಕೊಂಡು ತೆಂಗಿನಗುಂಡಿ ಬಂದರಿಗೆ ತಂದಿದ್ದರು. ಮೃತನ ಕೆಳ ತುಟಿಯು ಮೀನುಗಳು ತಿಂದಿದ್ದು ಗಾಯವಾಗಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ 7 ‌ದಿನ ಕಾಲ ಮೃತ ದೇಹವನ್ನು ಇಟ್ಟಿದ್ದರು. ಮೃತನ ಗುರುತು ಪತ್ತೆಯಾಗದೆ.

ಮೃತದೇಹವು ಸಂಬಂಧಿಕರು ಪತ್ತೆಯಾಗದ ಕಾರಣ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹೆಬಳೆ ಪಂಚಾಯತ ಪಿ.ಡಿ.ಓ ಹಸ್ತಾಂತರ ಮಾಡಿದರು ಬಳಿಕ ಸಮಾಜ ಸೇವಕ ಮಂಜುನಾಥ ಮುಟ್ಟಳ್ಳಿ ಹಾಗೂ ಲೈಫ್ ಕೇರ್ ಆಂಬುಲೆನ್ಸ್ ಚಾಲಕ ವಿನಾಯಕ ನಾಯ್ಕ,ಸಹಯೋಗದೊಂದಿಗೆ ಮಣ್ಕುಳಿಯ ಹಿಂದೂ ರುದ್ರಭೂಮಿಯಲ್ಲಿ ವಿಧಿ ವಿಧಾನಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.

ಈ ವೇಳೆ ಠಾಣೆ ಎ.ಎಸೈ ವಿನಾಯಕ ನಾಯ್ಕ, ಹೆಬಳೆ ಗ್ರಾಮ ಪಂಚಾಯತ ಪಿ.ಡಿ.ಓ ಮಂಜುನಾಥ ಗೊಂಡ,ಪೋಲಿಸ ಸಿಬ್ಬಂದಿಯಾದ ಅಂಬರೀಶ ಕುಂಬಾರಿ,ಕಿರಣ ಟಿಲಗಂಜಿ, ಸಮಾಜ ಸೇವಕ ಮಂಜು ಮುಟ್ಟಳ್ಳಿ ಹಾಗೂ ಲೈಫ್ ಕೇರ್ ಆಂಬುಲೆನ್ಸ್ ಚಾಲಕ ವಿನಾಯಕ ನಾಯ್ಕ ಇದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button