ಸಂಸದ ಅನಂತ್ ಕುಮಾರ್ ಹೆಗಡೆಯವರಿಗೆ ಪಾಸಿಟಿವ್

ಉತ್ತರಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆಯವರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಮುಂಗಾರು ಅಧಿವೇಶನ ಆರಂಭವಾಗುವ ಮೊದಲು ನಡೆಸಲಾಗಿರುವ ಕಡ್ಡಾಯ ಕರೊನಾ ಪರೀಕ್ಷೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆಯವರಿಗೆ ಪಾಸಿಟಿವ್ ಬಂದಿದೆ. ನಿನ್ನೆ ಶಾಸಕ ದಿನಕರ ಶೆಟ್ಟಿವರಿಗೆ ಸೋಂಕು ದೃಢಪಟ್ಟಿತ್ತು. ಅಲ್ಲದೆ, ಈ ಮೊಲದು ಸಚಿವರಾದ ಶಿವರಾಮ್ ಹೆಬ್ಬಾರ್, ಶಾಸಕ ಸುನೀಲ್ ನಾಯ್ಕ, ಮಾಜಿ ಶಾಸಕ ಮಂಕಾಳ್ ವೈದ್ಯರಿಗೂ ಸೋಂಕು ಕಾಣಿಸಿಕೊಂಡಿತ್ತು.

ಹೊನ್ನಾವರದಲ್ಲಿ ಇಂದು 20 ಕರೊನಾ ಕೇಸ್ ದಾಖಲು

ಹೊನ್ನಾವರ: ತಾಲೂಕಿನಲ್ಲಿ ಇಂದು 20 ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಪಟ್ಟಣ ವ್ಯಾಪ್ತಿಯಲ್ಲಿಯೇ ಅತಿಹೆಚ್ಚು ಅಂದರೆ 13 ಕೇಸ್ ದಾಖಲಾಗಿದೆ. ಹೋಸಾಕುಳಿ-4 ಕಡತೋಕಾ-ಸಾಲಕೋಡ.-ಆರೋಳ್ಳಿಯ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಪಟ್ಟಣದ ಮಡಿವಾಳಹಳ್ಳದ 30 ವರ್ಷದ ಯುವಕ, 68 ವರ್ಷದ ಪುರುಷ, 57 ವರ್ಷದ ಮಹಿಳೆ, ಬಾಂದೇಹಳ್ಳದ 73 ವರ್ಷದ ಪುರುಷ, ಕೆಳಗಿನಪಾಳ್ಯದ 46 ವರ್ಷದ ಪುರುಷ, 70 ವರ್ಷದ ಮಹಿಳೆ, 46 ವರ್ಷದ ಪುರುಷ, ಚರ್ಚ್ಕ್ರಾಸಿನ 42 ವರ್ಷದ ಮಹಿಳೆ, ಪ್ರಭಾತ ನಗರದ 70 ವರ್ಷದ ಪುರುಷ, 47 ವರ್ಷದ ಮಹಿಳೆ, 38 ವರ್ಷದ ಮಹಿಳೆ, 21 ವರ್ಷದ ಯುವತಿ, 23 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.

ಗ್ರಾಮೀಣ ಭಾಗವಾದ ಕಡತೋಕಾ ಹೆಬಲೆಕೋಪ್ಪಾ 29 ವರ್ಷದ ಯುವಕ, ಸಾಲಕೋಡ ಕೋಂಡಾಕುಳಿಯ 56 ವರ್ಷದ ಮಹಿಳೆ, ಆರೋಳ್ಳಿಯ 29 ವರ್ಷದ ಯುವಕ, ಹೊಸಾಕುಳಿಯ 53 ವರ್ಷದ ಪುರುಷ, 83 ವರ್ಷದ ಪುರುಷ, 16 ವರ್ಷದ ಬಾಲಕ, 11 ವರ್ಷದ ಬಾಲಕಿ ಸೇರಿದಂತೆ ಇಂದು 20 ಜನರಲ್ಲಿ ಕರೋನಾ ಪಾಸಿಟಿವ್ ಬಂದಿದೆ. ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ 25 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 182 ಜನರು ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Exit mobile version