ಮಾಹಿತಿ
Trending

ಅಂಕೋಲಾದಲ್ಲಿಂದು 14 ಕೇಸ್

20 ಮಂದಿ ಬಿಡುಗಡೆ : 83 ಸಕ್ರಿಯ ಪ್ರಕರಣ
ಬೆಳಸೆ, ವಾಸರೆ, ಕೊಡ್ಲಗದ್ದೆ, ಬಾಸಗೋಡ, ಅಜ್ಜಿಕಟ್ಟಾ, ಅಂಬಾರಕೋಡ್ಲ, ಹಟ್ಟಿಕೇರಿಯಲ್ಲಿ ಕಾಣಿಸಿಕೊಂಡ ಸೋಂಕು

[sliders_pack id=”3491″]

ಅಂಕೋಲಾ : ತಾಲೂಕಿನ ಬೆಳಸೆ, ವಾಸರೆ, ಕೊಡ್ಲಗದ್ದೆ, ಬಾಸಗೋಡ, ಅಜ್ಜಿಕಟ್ಟಾ, ಅಂಬಾರಕೊಡ್ಲ, ಹಟ್ಟಿಕೇರಿ ಸೇರಿದಂತೆ ವಿವಿಧ ಭಾಗಗಳಿಂದ ಭಾನುವಾರ ಒಟ್ಟು 14 ಕೋವಿಡ್ ಕೇಸ್‍ಗಳು ದಾಖಲಾಗಿವೆ.

ಇವುಗಳಲ್ಲಿ 3 ಪ್ರಕರಣಗಳು ಜ್ವರ ಲಕ್ಷಣಗಳಿಂದ ಕೂಡಿರುವ ಐಎಲ್‍ಐ ಮಾದರಿ ಪಾಸಿಟಿವ್ ಆಗಿದ್ದು, ಉಳಿದ 11 ಪ್ರಕರಣಗಳು ಸೋಂಕಿತರ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದೆ.

ಸೋಂಕು ಮಕ್ತರಾದ 20 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 61 ಜನರ ಸಹಿತ ಒಟ್ಟೂ 83 ಪ್ರಕರಣಗಳು ಸಕ್ರಿಯವಾಗಿದೆ. ಇಂದು 45 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Related Articles

Back to top button