ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆ
ಕೆಲದಿನಗಳ ಕಾಲ ಪಟ್ಟಣದಲ್ಲಿ ಕಿರಾಣಿ ವ್ಯಾಪಾರ ಬಂದ್
[sliders_pack id=”1487″]
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 6 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಮೂರೂರಿನ 75 ವರ್ಷದ ವೃದ್ಧ, ಕುಮಟಾದ 38 ವರ್ಷದ ಮಹಿಳೆ, ಕುಮಟಾ 32 ವರ್ಷದ ಪುರುಷ, ಕುಮಟಾದ 63 ವರ್ಷದ ಪುರುಷ ಹಾಗೂ ಕುಮಟಾದ 12 ವರ್ಷದ ಇಬ್ಬರು ಬಾಲಕಿಯರಲ್ಲಿ ಸೋಂಕು ದೃಢಪಟ್ಟಿದೆ.
ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 754 ಕ್ಕೆ ಏರಿಕೆಯಾಗಿದೆ. ದಿನೆ ದಿನೆ ಕುಮಟಾ ಪಟ್ಟಣದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಬೇಕೆoಬ ಉದ್ದೇಶದಿಂದ ಕುಮಟಾ ಪಟ್ಟಣದ ಕಿರಾಣಿ ವ್ಯಾಪಾರಿ ಸಂಘವು ಸೆಪ್ಟೆಂಬರ್ 16 ರ ಬುಧವಾರದಿಂದ ಸೆಪ್ಟೆಂಬರ್ 22 ರ ಮಂಗಳವಾರದ ವರೆಗೆ ಎಲ್ಲಾ ಕಿರಾಣಿ ಹೊಲಸೇಲ್ ಮತ್ತು ಚಿಲ್ಲರೆ ವ್ಯಾಪಾರವನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಎಲ್ಲಾ ಸಾರ್ವಜನಿಕರು ಒಂದು ವಾರದ ಬಂದ್‌ಗೆ ಸಹಕರಿಸಿ ಕರೋನಾ ನಿಯಂತ್ರಣದಲ್ಲಿ ಕೈಜೋಡಿಸಬೇಕಾಗಿ ಕೋರಿದ್ದಾರೆ.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ
ಬೇಕಾಗಿದ್ದಾರೆ
ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568