Important
Trending

ಕಾಲುನೋವು ತಾಳಲಾರದೆ ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನ: ಚಿಕಿತ್ಸೆ ಫಲಿಸದೆ ಸಾವು

ಸಿದ್ದಾಪುರ: ಬಾವಿಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಗಣಪತಿ ಈರ ನಾಯ್ಕ್ ಕೋಲ್ ಶಿರಸಿ ( 65 ) ಮೃತ ವ್ಯಕ್ತಿ. ಕಾಲು ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ನೋವು ತಾಳಲಾರದೆ ಮನೆಯ ಮುಂದಿನ ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ. ಮಾಹಿತಿ ತಿಳಿದು ಕಾರ್ಯಾಚರಣೆಗಿಳಿದ ಅಗ್ನಿಶಾಮಕ ದಳದವರು ಈತನನ್ನು ಬಾವಿಯಿಂದ ಮೇಲೆಕ್ಕೆ ಎತ್ತಿದ್ದರು.

ಚಿಕಿತ್ಸೆಗಾಗಿ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯರು ಮೃತಪಟ್ಟಿರುವುದು ದೃಡಪಡಿಸಿದ್ದು ಸಿದ್ದಾಪುರ ಠಾಣೆಯಲ್ಲಿ ದೂರ ದಾಖಲಾಗಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button