Important
Trending

ಮೀನುಮಾರುಕಟ್ಟೆಯಲ್ಲಿನ ಅಂಗಡಿಯಲ್ಲಿ ಕಳ್ಳತನ: ಬೀಗ ಮುರಿದು ಹಣ ಕದ್ದೊಯ್ದ ದುಷ್ಕರ್ಮಿಗಳು

ಸಿದ್ದಾಪುರ: ಪಟ್ಟಣದ ಮೀನು ಮಾರುಕಟ್ಟೆ ಯಲ್ಲಿನ ಅಂಗಡಿಯೊoದರಲ್ಲಿದ್ದ ನಗದು ಹಣವನ್ನು ಅಂಗಡಿಯ ಬೀಗ ಮುರಿದು ಕಳ್ಳರು ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ. ಗೀತಾ ಹನುಮಂತ ನಾಯ್ಕ್ ಹೊಸೂರ್ ಎನ್ನುವರಿಗೆ ಸೇರಿದ ಅಂಗಡಿಯಲ್ಲಿ ಮೀನಿನವರಿಗೆ ಮತ್ತು ಪಟ್ಟಣ ಪಂಚಾಯಿತಿಗೆ ಬಾಡಗೆ ಕಟ್ಟಲೆಂದು ಇಟ್ಟಿದ್ದ 29 ಸಾವಿರ ರೂ ಹಣವನ್ನ ದೋಚಲಾಗಿದೆ. ಬೆಳಗ್ಗೆ ಅಂಗಡಿಗೆ ಬರುತ್ತಿದ್ದಂತೆ ಹಣ ಕಳ್ಳತನ ವಾಗಿರುವುದನ್ನ ಗಮನಿಸಿದ ಅಂಗಡಿಕಾರರಾದ ದೇವಾನಂದ ಮತ್ತು ಗಣಪತಿ ಅವರು ಗಾಬರಿಗೊಳಗಾಗಿ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ,

ನಂತರ 112 ವಾಹನಕ್ಕೆ ಕರೆ ಮಾಡಿ ವಿಷಯವನ್ನು ತಿಳಿಸಿ 112 ವಾಹನದ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬoಧಿಸಿದoತೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button