
ಕುಮಟಾ: ಯಾವುದೇ ಪರವಾನಿಗೆಯಿಲ್ಲದೇ ಹಿಂಸಾತ್ಮಕವಾಗಿ ಅಕ್ರಮವಾಗಿ ಜಾನುವಾರುಗಳನ್ನು ಲಾರಿಯಲ್ಲಿ ತುಂಬಿಕೊoಡು ಹೋಗುತ್ತಿರುವುದನ್ನು ಪತ್ತೆ ಹಚ್ಚಿ ಓರ್ವ ಆರೋಪಿಯನ್ನು ಸೆರೆ ಹಿಡಿದ ಘಟನೆ ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ಬಳಿ ನಡೆದಿದೆ. ಕಂಟೇನರ್ ಲಾರಿಯಲ್ಲಿ ಎಲ್ಲಿಂದಲೋ 14 ಎತ್ತುಗಳನ್ನು ತುಂಬಿಕೊoಡು ಸಾಗಾಟ ಮಾಡುತ್ತಿದ್ದರು.
ಜಾನುವಾರುಗಳಿಗೆ ನಿಲ್ಲಲು, ಮಲಗಲು ಆಗದಂತೆ, ಆಹಾರದ ವ್ಯವಸ್ಥೆಯೂ ಇಲ್ಲದೇ ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದರು. ಅಕ್ರಮ ಸಾಗಾಟದ ಶಂಕೆಯಿpದ ತಾಲೂಕಿನ ಹೊಳೆಗದ್ದೆ ಟೋಲ್ ಬಳಿ ರಾತ್ರಿ ಪೊಲೀಸರು ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಾಟ ನಡೆಸುತ್ತಿರುವುದು ಪತ್ತೆಯಾಗಿದೆ. ಲಾರಿಯಲ್ಲಿದ್ದ 14 ಜಾನುವಾರುಗಳ ಪೈಕಿ 5 ಜಾನುವಾರುಗಳು ಲಾರಿಯಲ್ಲೇ ಸಾನ್ನಪ್ಪಿದ್ದವು.
ಸುಮಾರು 2.25 ಲಕ್ಷರೂ ಅಂದಾಜು ಮೌಲ್ಯದ ಉಳಿದ 9 ಜಾನುವಾರು ವಶಪಡಿಸಿಕೊಳ್ಳಲಾಗಿದ್ದು, ಮಹಾರಾಷ್ಟ್ರದ ಠಾಣಾ ಜಿಲ್ಲೆಯ ನಿಜಾಂಪುರದ ಭಿವಂಡಿ ಅಮಿನಾಭಾಗ ನಿವಾಸಿ ಲಾರಿ ಚಾಲಕ 22 ವರ್ಷದ ಅನ್ಸಾರಿ ಮಹಮದ್ ಎನ್ನುವವನನ್ನು ಪೊಲೀಸರು ಹಡೆಮುರಿಕಟ್ಟಿದ್ದಾರೆ. ಈ ಪ್ರಕರಣದಲ್ಲಿ 6 ಮಂದಿ ತಲೆಮರೆಸಿಕೊಂಡಿದ್ದು, ಆರೋಪಿಗಳಾದ ಮಹಾರಾಷ್ಟ್ರದ ಸಮೀರ ಶೇಖ, ಜಾವೇದ ಮುಲ್ಲಾ, ಭಟ್ಕಳದ ಹನೀಫಾಬಾದ್ ನಿವಾಸಿ ಆಶೀಫ್ ಲತೀಫ ಕೋಲಾ, ಭಟ್ಕಳ ಆಝಾದನಗರದ ಅಫ್ಜಲ್ ತಲ್ಹಾ ಖಾಸಿಂಜಿ, ಭಟ್ಕಳ ಕಾರಗದ್ದೆಯ ಮದಸೀರ್ ಮಹಮದ್ ಅಲಿ ಕೋಲಾ ಹಾಗೂ ಕಂಟೇನರ್ ಮಾಲೀಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ