Focus News
Trending
ಹೊನ್ನಾವರ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ವರ್ದಂತಿ ಉತ್ಸವ: ವಿವಿಧ ಸೇವೆ ಸಲ್ಲಿಸಿದ ಭಕ್ತರು

ಹೊನ್ನಾವರ: ತಾಲೂಕಿನ ದುರ್ಗಾಕೇರಿಯಲ್ಲಿರುವ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ವರ್ದಂತಿ ಉತ್ಸವವು ವಿಜೃಂಭಣೆಯಿoದ ನಡೆಯಿತು. ಭಕ್ತರು ದೇವಸ್ಥಾನಕ್ಕೆ ಬೇಟಿ ನೀಡಿ ವಿವಿಧ ಸೇವೆಗಳನ್ನ ಸಲ್ಲಿಸಿದರು. ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಶ್ರೀ ಗಣೇಶ ಪೂಜೆಯೋಂದಿಗೆ ಧಾರ್ಮಿಕ ವಿಧಿವಿಧಾನಗಳು, ಹೋಮ ಹವನಗಳು ನೇರವೇರಿತು.
ದೇವಸ್ಥಾನದಲ್ಲಿ ಮಹಿಳೆಯರಿಗೆ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ ಸಹಿತ ವಿವಿಧ ಸೇವೆಗಳು ನಡೆದವು. ಈ ಸಂದರ್ಭದಲ್ಲಿ ಮಾತನಾಡಿದ ದೈವಜ್ಞ ಯುವಕ ವಾಹಿನಿಯ ಅಧ್ಯಕ್ಷರಾದ ಗಣೇಶ ಶೇಟ್, ಪ್ರತಿವರ್ಷದಂತೆ ಈ ವರ್ಷವು ಸಹ ವಿಜೃಂಭಣೆಯಿoದ ವರ್ಧಂತಿ ಉತ್ಸವವನ್ನು ನೇರವೇರಿಸಿಕೊಂಡು ಬರುತ್ತಿದೇವೆ. ಧಾರ್ಮಿಕ ಕಾರ್ಯಕ್ರಮದೊಂದಿಗೆ ಯಶ್ವಸ್ವಿಯಾಗಿ ನಡೆಯಿತು ಎಂದರು. ದೇವಸ್ಥಾನದಲ್ಲಿ ಭಕ್ತರು ಬಂದು ತನು-ಮನ-ಧನದಿಂದ ಸೇವೆ ನೀಡಿ ಮನೋಕಾಮನೆಗಾಗಿ ಪ್ರಾರ್ಥಿಸಿಕೊಂಡರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ