
ಭಟ್ಕಳ: ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಎಮ್.ಜಿ.ಎಮ್ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆಯು ಸೋಮವಾರದಂದು ಮುಂಡಳ್ಳಿಯಲ್ಲಿ ಉದ್ಘಾಟನೆಗೊಂಡಿತು. ಅರ್ಬನ್ ಬ್ಯಾಂಕ್ ನ ಮಾಜಿ ನಿರ್ದೇಶಕ ಎಂ ಆರ್ ನಾಯ್ಕ ನೂತನವಾಗಿ ನಿರ್ಮಾಣವಾದ ಸಂಘದ 6 ನೇ ಶಾಖೆಯನ್ನು ಉದ್ಘಾಟಿಸಿ, ಠೇವಣಿ ಇಟ್ಟು ಶುಭ ಹಾರೈಸಿದರು.
ಮುಂಡಳ್ಳಿಯ ಸತ್ಯನಾರಾಯಣ ದೇವಸ್ಥಾನದ ಸಮೀಪ ಪ್ರಾರಂಭವಾದ ನೂತನ ಶಾಖೆ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳನ್ನು ಒಳಗೊಂಡ ಶಾಖೆಯಾಗಿದ್ದು. ಮಹಿಳಾ ಸಬಲಿಕರಣದ ದೃಷ್ಟಿಯಿಂದ ಸಹಕಾರಿ ಸಂಘದ ಸಂಸ್ಥಾಪಕ ಈರಪ್ಪ ನಾಯ್ಕ ಗರ್ಡಿಕರ್ ಇಡುತ್ತಿರುವ ಹೆಜ್ಜೆ ಶ್ಲಾಘನೀಯವೆನಿಸುತ್ತದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಈರಪ್ಪ ನಾಯ್ಕ ಗರ್ಡಿಕರ್, ಭಟ್ಕಳ ನಾಮಧಾರಿ ಸಂಘದ ಉಪಾಧ್ಯಕ್ಷ ಎಂ ಕೆ ನಾಯ್ಕ, ಬೆಳ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ನಾಯ್ಕ, ಶ್ರೀನಿವಾಸ ನಾಯ್ಕ ಮತ್ತಿತರರು ಹಾಜರಿದ್ದರು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ