Join Our

WhatsApp Group
Important
Trending

ರಾತ್ರಿ ವೇಳೆ ಬೈಕ್ ಗಳಿಂದ ಪೆಟ್ರೋಲ್ ಕಳ್ಳತನ

ಕುಮಟಾ: ರಾತ್ರಿ ಸಮಯದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿಟ್ಟ ದ್ವಿಚಕ್ರವಾಹನಗಳಿಂದ ಪೆಟ್ರೋಲ್ ಕದಿಯುವ ಯುವಕರ ತಂಡ ಕುಮಟಾ ತಾಲೂಕಿನಲ್ಲಿ ಕಾರ್ಯಪ್ರವೃತ್ತವಾಗಿದೆ. ತಾಲೂಕಿನ ದಿವಗಿಯ ತಂಡ್ರಕುಳಿ ಭಾಗದಲ್ಲಿ ರಾತ್ರಿ ವೇಳೆ ದ್ವಿಚಕ್ರವಾಹನಗಳಿಂದ ಪೆಟ್ರೋಲ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೌದು ತಂಡ್ರಕುಳಿ ಸಮೀಪದ ಮನೆಯ ಬಳಿ ರಾತ್ರಿಯ ಸಮಯದಲ್ಲಿ ಬಂದ ಯವಕನೋರ್ವ ಅಲ್ಲಿಯೇ ನಿಲ್ಲಿಸಿಟ್ಟ ಬೈಕ್‌ನಿಂದ ಪೆಟ್ರೋಲ್ ಕದ್ದು ಹೋಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಯುವಕ ಯಾರು? ಎಲ್ಲಿಯವನು? ಎಂಬಿತ್ಯಾದಿ ವಿವರಗಳನ್ನು ಕಲೆಹಾಕುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ಈ ಕುರಿತಂತೆ ಮನೆಯ ಮಾಲೀಕರು ಕುಮಟಾ ಪೋಲೀಸರಿಗೆ ಮಾಹಿತಿ ನೀಡಿದ್ದು ಕುಮಟಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಕಡಲ ತೀರಗಳಲ್ಲಿ ನಿಲ್ಲಿಸಿಟ್ಟ ವಾಹನಗಳಿಂದ ಪೆಟ್ರೋಲ್ ಕದಿಯುವ ಅನೇಕ ಘಟನೆಗಳು ಈ ಹಿಂದೆಯೂ ಕೂಡಾ ಹಲವಾರು ಬಾರಿ ನಡೆದಿದೆ. ಕೆಲವು ಕಡೆಗಳಲ್ಲಿ ಒಂದೆರಡು ಬಾರಿ ಈ ಕಳ್ಳರನ್ನು ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿದ ಉದಾಹರಣೆಗಳೂ ಸಹ ನಡೆದಿದೆ.

ವಿಸ್ಮಯ ನ್ಯೂಸ್ ಕುಮಟಾ

Back to top button