ಗೋದಾವರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಘವೇಂದ್ರ ಡಿ ನಾಯಕ ದೇವರಬಾವಿ ಅವರಿಗೆ ಸಂದ 2025ರ ಗ್ಲೋಬಲ್ ಅಚಿವರ್ಸ್ ಅವಾರ್ಡ್ : ರಷ್ಯಾ ದೇಶದಲ್ಲಿ ನಡೆದ ಭವ್ಯ ಸಮಾರಂಭ
ಯುವ ನಾಯಕನ ಕಿರೀಟಕ್ಕೆ ಸೇರ್ಪಡೆಯಾದ ಮತ್ತೊಂದು ಮುಕುಟ ಮಣಿ

- 2025ರ ಗ್ಲೋಬಲ್ ಅಚಿವರ್ಸ್ ಅವಾರ್ಡ್ಸ್ ಪ್ರಧಾನ
- ರಷ್ಯಾದಲ್ಲಿ ಭವ್ಯ ಸಮಾರಂಭ
- ದೇಶ – ವಿದೇಶಗಳ ಗಣ್ಯರು ಭಾಗಿ
- ಗೋದಾವರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಘವೇಂದ್ರ ನಾಯಕ ಸಾಧನೆಗೆ ಗೌರವ
ಅಂಕೋಲಾ : ಸಾಮಾಜಿಕ ಕಳಕಳಿಯುಳ್ಳ ಬಹುಮುಖಿ ವ್ಯಕ್ತಿತ್ವದ ಯುವ ನಾಯಕ, ಗೋದಾವರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಘವೇಂದ್ರ ಡಿ ನಾಯಕ ದೇವರಬಾವಿ ಅವರನ್ನು 2025ರ ಗ್ಲೋಬಲ್ ಅಚಿವರ್ಸ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ವಿಶ್ವವಾಣಿ ಸಂಸ್ಥೆ ಮತ್ತು ರಷ್ಯಾ ಕಾನ್ಹೆಟ್ ಸಹಯೋಗದೊಂದಿಗೆ ಅಪೂರ್ವ ಸಾಧಕರಿಗೆ ನೀಡುವ ಪ್ರಶಸ್ತಿ ಇದಾಗಿದ್ದು ವಿದೇಶಿ ನೆಲದಲ್ಲಿ ನಡೆದ ಈ ಪ್ರಶಸ್ತಿ ಪ್ರಧಾನ ವರ್ಣರಂಜಿತವಾಗಿತ್ತು.
2025ರ ಗ್ಲೋಬಲ್ ಅಚೀವರ್ಸ ಪ್ರಶಸ್ತಿ ಸ್ವೀಕಾರ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಗಣ್ಯರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದ್ದು, ಉದ್ಯಮ , ಕೈಗಾರಿಕೆ, ಸಹಕಾರಿ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ತೋರುತ್ತ ಈ ವರೆಗೆ ನೂರಾರು ಪ್ರಶಸ್ತಿ ಸನ್ಮಾನ ಗೌರವಗಳನ್ನು ಮುಡಿಗೇರಿಸಿಕೊಂಡ ರಾಘವೇಂದ್ರ ನಾಯಕ ರಷ್ಯಾದ ಮಾಸ್ಕೊ ನಗರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಇತ್ತೀಚೆಗೆ 2025ರ ಗ್ಲೋಬಲ್ ಅಚೀವರ್ಸ ಪ್ರಶಸ್ತಿ ಸ್ವೀಕರಿಸಿದರು.
ತಮ್ಮ ವೃತ್ತಿ ಹಾಗೂ ಪ್ರವೃತ್ತಿ ಎರಡರಲ್ಲೂ ಸಮರ್ಥ ಸಾಧಕರಾಗಿ ಗೋದಾವರಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಡಿ ನಾಯಕ ದೇವರಬಾವಿ ಅವರು , ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮ ಕ್ಷೇತ್ರದಲ್ಲಿ ಪಾದರ್ಪಣೆ ಮಾಡಿ ಹುಬ್ಬಳ್ಳಿಯಲ್ಲಿ ಗೋದಾವರಿ ಇನ್ಪ್ರಾ ಎನ್ನುವ ಕಂಪನಿಯನ್ನು ಪ್ರಾರಂಭಿಸಿ, ಜೊತೆಗೆ ಗೋದಾವರಿ ಇಂಡಸ್ಟ್ರೀಸ್ ಆರಂಭ ಮಾಡಿ ಹಲವರಿಗೆ ಉದ್ಯೋಗ ನೀಡುವುದರೊಂದಿಗೆ, ಅಲ್ಲಿನ ಹಾಗೂ ಇತರೆಡೆಯ ಸಾವಿರಾರು ಜನರಿಗೆ ತನ್ನ ಕೈಲಾದ ಆರ್ಥಿಕ ನೆರವು ಮತ್ತಿತರ ಸೇವೆ ನೀಡುವುದರ ಜೊತೆ ಕೆಲವರು ಶೈಕ್ಷಣಿಕ ಪ್ರಗತಿಗೆ ನೆರವಾಗಿ ಹಲವರು ಸಂಕಷ್ಟಕ್ಕೆ ಸ್ವಂದಿಸಿ ಮಾನವೀಯ ನೆರವು ನೀಡಿ ಅಸಹಾಯಕರ ಬಾಳಲ್ಲಿ ಹೊಸ ಭರವಸೆ ಮೂಡಿಸಿದವರು.

ಸಹಕಾರಿ ಕ್ಷೇತ್ರದಲ್ಲಿ ನೂರಾರು ಕೋಟಿ ವಹಿವಾಟಿನೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಗೋದಾವರಿ ಸೌಹಾರ್ದ ಸಹಕಾರಿಯನ್ನು ಪ್ರಾರಂಭಿಸಿ ಸಂಕಷ್ಟದಲ್ಲಿರುವ ಹಾಗೂ ಸ್ವಯಂ ಉದ್ಯೋಗವನ್ನು ಮಾಡುವ ಹಲವು ಗ್ರಾಹಕರಿಗೆ ಸಾಲ ರೂಪದ ಆರ್ಥಿಕ ನೆರವನ್ನು ನೀಡಿ , ದುಡಿಯುವ ಕೈಗಳಿಗೂ ಉದ್ಯೋಗದಾತರಾದವರು ಇವರು.
ತನ್ನ ತಾಯಿ ಗೋದಾವರಿಯ ಹೆಸರನ್ನು ಶಾಶ್ವತವಾಗಿ ಇಡಬೇಕೆನ್ನುವ ಕನಸಿಂದ ಇವರು ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಗೋಕರ್ಣದಲ್ಲಿ ಹೋಟೆಲ್ ದಿ ಗೋದಾವರಿ ಎನ್ನುವ ಅತ್ಯಂತ ಸುಂದರ ಮತ್ತು ಸುಸಜ್ಜಿತ ತ್ರೀ ಸ್ಟಾರ್ ಹೋಟೆಲ್ ಅನ್ನು ನಿರ್ಮಿಸಿ ಪ್ರವಾಸೋದ್ಯಮ ಬೆಳವಣಿಗೆಗೆ ಹೊಸ ಕೊಡುಗೆ ನೀಡಿದ್ದು , ತಾಲೂಕಾ ಕೇಂದ್ರವೂ ಅಲ್ಲದ ಗೋಕರ್ಣದಂತ ಗ್ರಾಮೀಣ ಪ್ರದೇಶದಲ್ಲಿ ಹೊಟೆಲ್ ದಿ ಗೋದಾವರಿ ಪ್ರವಾಸಿಗರನ್ನು ಕೈ ಬೀಸಿ ಕರೆದು ಇಲ್ಲಿಯ ಘನತೆಯನ್ನು ಹೆಚ್ಚಿಸಿದೆ.

ತಮ್ಮ ಸೌಹಾರ್ದ ಸಹಕಾರಿಯ ಪರವಾಗಿ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಇತರೆ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಾಧಕರ ಹಾಗೂ ಪ್ರತಿಭಾ ಪುರಸ್ಕಾರ, ಉಳುವರೆ ಸಂತ್ರಸ್ತರಿಗೆ ನೆರವು ಮತ್ತಿತರ ಕಾರ್ಯಗಳ ಮೂಲಕ ಸಹಕಾರಿಯ ಹೆಸರಿಗೆ ತಕ್ಕಂತೆ ಹಲವರಿಗೆ ಸಹಕಾರಿಯಾದವರು. ಇವರು ಸಹಕಾರಿ ಕ್ಷೇತ್ರದಲ್ಲಿ ತೋರಿದ ಸಾಧನೆ ಮತ್ತು ಗಣನೀಯ ಪ್ರಗತಿಗೆ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಇವರಿಗೆ ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದನ್ನು ಸ್ಮರಿಸಬಹುದಾಗಿದ್ದು, ಈಗ ವಿದೇಶಿ ನೆಲದಲ್ಲೂ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವ ಮೂಲಕ ಅವರ ಸಾಧನೆಯ ಮತ್ತು ಕೀರ್ತಿಯ ಕಿರೀಟಕ್ಕೆ ಮತ್ತೊಂದು ಮುಕುಟ ಮಣಿ ಸೇರ್ಪಡೆ ಆದಂತಿದೆ.
ಇಂತಹ ಸಾಧಕರಿಗೆ ವಿಶ್ವವಾಣಿ ರಷ್ಯಾದಂತ ಪ್ರತಿಷ್ಠಿತ ವಿದೇಶಿ ನೆಲದಲ್ಲಿ ಇತರೆ ಕೆಲ ಸಾಧಕರೊಂದಿಗೆ ಗೌರವ ನೀಡಿರುವುದು ಪ್ರಶಸ್ತಿ ಮೌಲ್ಯ ಹೆಚ್ಚಿಸುವ ಜೊತೆಯಲ್ಲಿ ರಾಘವೇಂದ್ರನ ಸೇವೆ ಮತ್ತು ಸಹಕಾರದ ಗುಣವನ್ನು ದೇಶ ವಿದೇಶಗಳಲ್ಲಿ ಪರಿಚಯಿಸಿರುವುದು ಹೆಮ್ಮೆಯ ವಿಷಯ..
ಹತ್ತಾರು ವರ್ಷಗಳಲ್ಲಿ ನೂರಾರು ಪ್ರಶಸ್ತಿ ಗೌರವ
ಕಲೆ, ಶಿಕ್ಷಣ, ಸಾಹಿತ್ಯ, ಕ್ರೀಡೆ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕಾರ್ಯಗಳಿಗೆ ಸಹಕರಿಸಿ , ಪ್ರೋತ್ಸಾಹಿಸಿ ಹಲವರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕುತ್ತಿರುವ ಮಾನವೀಯ ಕಳಕಳಿಯುಳ್ಳ ಈ ಯುವ ನಾಯಕನಲ್ಲಿ ಹೋರಾಟದ ಮನೋಭಾವ,ಶಿಸ್ತು , ಅಪರಿಮಿತ ಶ್ರಮ ,ಸಾಧನೆಯ ತುಡಿತ , ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣ ವಿಶೇಷತೆಯಿಂದಾಗಿ ತನ್ನ ವ್ಯಕ್ತಿತ್ವವನ್ನು ಮುತ್ತಷ್ಟು ಎತ್ತರಕ್ಕೆ ಏರಿಸಿಕೊಳ್ಳುತ್ತಿರುವ ರಾಘವೇಂದ್ರನಾಯಕ ಅವರಿಗೆ ಕಳೆದ ಹತ್ತಾರು ವರ್ಷಗಳಲ್ಲಿ ನೂರಾರು ಪ್ರಶಸ್ತಿ ಗೌರವಗಳು ಅರಸಿ ಬಂದಿದೆ.
ರಷ್ಯಾದ ರಾಜ ತಾಂತ್ರಿಕರು, ಸಚಿವರು, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ದಿವ್ಯ ಸಾನಿಧ್ಯ ವಹಿಸಿದ್ದ ಇಮ್ಮಡಿಸಿದ್ದರಾಮೇಶ್ವರ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ , ಮುಖ್ಯ ಅತಿಥಿಗಳಾಗಿದ್ದ ಮಾಜಿ ಸಚಿವ ಆರಗ ಜ್ಞಾನೇಂದ್ರ ಮುಂತಾದವರು ಈ ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ ಬಿ ಸಿ ಪಾಟೀಲ, ಪ್ರಮೋದ ಮಧ್ವರಾಜ ಸೇರಿದಂತೆ ಇತರೆ ಕೆಲ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ,ವೈದ್ಯರು,ಶಿಕ್ಷಕರು ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಈ ಪ್ರಶಸ್ತಿಗೆ ಪರಿಗಣಿಸಿ ಅವರಿಗೂ ಗೌರವ ಪ್ರಧಾನ ಮಾಡಲಾಗಿದೆ. ಒಟ್ಟಾರೆಯಾಗಿ ದೇಶ ವಿದೇಶಿಗಳ ಗಣ್ಯರು ಪಾಲ್ಗೊಂಡಿದ್ದ ಈ ಭವ್ಯ ಸಮಾರಂಭದಲ್ಲಿ ರಾಘವೇಂದ್ರ ನಾಯಕ ದೇವರಬಾವಿ ಇವರು ಗ್ಲೋಬಲ್ ಅಚೀವರ್ಸ ಆವಾರ್ಡ್ ಪಡೆದುಕೊಂಡಿರುವುದು ಅವರ ಆತ್ಮೀಯ ವಲಯ ಹಾಗೂ ಗೆಳೆಯರ ಬಳಗದಲ್ಲಿ ಸಂತಸಕ್ಕೆ ಕಾರಣವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ