
ಶಿರಸಿ: ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಯುವತಿ ಕಾಣೆಯಾಗಿದ್ದಾಳೆ. ಇಲ್ಲಿನ ಗಣೇಶನಗರದ ಪುಟ್ಟನಮನೆಯ ಯುವತಿಯೊಬ್ಬಳು ನಾಪತ್ತೆಯಾದ ಕುರಿತು ಶಿರಸಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. 23 ವರ್ಷದ ಲಿನೇಟ್ ಪ್ರಾನ್ಸಿಸ್ ರೊಡ್ರಗೀಸ್ ನಾಪತ್ತೆಯಾದ ಯುವತಿ. ಈಕೆ ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ.
ಈಕೆಯನ್ನು ಪತ್ತೆ ಮಾಡಿಕೊಡುವಂತೆ ತಾಯಿ ಫಿಲೋಮಿನಾ ರೊಡ್ರಗೀಸ್ ಶಿರಸಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾಣೆಯಾದ ಯುವತಿಯು 5.4 ಎತ್ತರವಿದ್ದು, ಕನ್ನಡ, ಕೊಂಕಣಿ, ಹಿಂದಿ ಮಾತನಾಡುತ್ತಾಳೆ. ಈಕೆ ಎಲ್ಲಿಯಾದರೂ ಪತ್ತೆಯಾದಲ್ಲಿ ಶಿರಸಿ ನಗರ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿಸ್ಮಯ ನ್ಯೂಸ್, ಶಿರಸಿ