Join Our

WhatsApp Group
Important
Trending

ಆಕ್ಸಿಸ್ ಬ್ಯಾಂಕ್‌ನಲ್ಲಿ ಬೆಂಕಿ ಅನಾಹುತ: ಅಪಾರ ಹಾನಿ

ಕುಮಟಾ: ತಾಲೂಕಿನ ಹೆದ್ದಾರಿ 66 ರ ಪಕ್ಕದಲ್ಲಿರುವ ಆಕ್ಸಿಸ್ ಬ್ಯಾಂಕ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಕುಮಟಾ ಪಟ್ಟಣದ ಸನ್ಮಾನ ಹೋಟೆಲ್ ಪಕ್ಕದಲ್ಲಿರುವ ಆಕ್ಸಿಸ್ ಬ್ಯಾಂಕ್ ನ ಶಾಖೆಯಲ್ಲಿ ಬೆಳಿಗ್ಗೆ 6.40 ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡವಾಗಿದೆ.

ಆಕ್ಸಿಸ್ ಬ್ಯಾಂಕ್ ನ ಶಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಹೋಟೆಲ್‌ನ ಸಿಬ್ಬಂದಿಗಳು ಕುಮಟಾ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿಗಳಾದ ತಮ್ಮಯ್ಯ ಎನ್ ಗೊಂಡ ಅವರ ನೇತೃತ್ವದಲ್ಲಿ ಕುಮಾರ್ ಗೌಡ , ದಿನೇಶ್ ವೆಂಗುರೇಕರ್ , ಮಹೇಶ್ ಶೆಟಿ,್ಟ ಗುರುನಾಥ್ ನಾಯಕ್, ವಿಷ್ಣು ಗೌಡ , ಅಜಯ್ ನಾಯಕ್ ಅವರು ಬೆಂಕಿಯನ್ನು ಯಶಸ್ವಿಯಾಗಿ ನಂದಿಸಲು ಸಫಲರಾಗಿದ್ದಾರೆ.

ಈ ಬೆಂಕಿ ಅವಘಡದಲ್ಲಿ ಬ್ಯಾಂಕಿನ ಕಂಪ್ಯೂಟರ್, ಪ್ರಿಂಟರ್, ಪೀಠೋಪಕರಣಗಳು, ಎಸಿ, ಕೌಟಿಂಗ್ ಮಷೀನ್, ಸೇರಿ ದಾಖಲಾತಿಗಳು ಸುಟ್ಟು ಕರಕಲಾಗಿದ್ದು, ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ಕುಮಟಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ದಿಪೇಶ್ ನಾಯ್ಕ, ಕುಮಟಾ

Back to top button