
ಕಾರವಾರ: ಮೇ 24 ರಂದು ಭಾರೀ ಮಳೆಯಾಗುವ ಮನ್ಸೂಚನೆ ಇದ್ದು ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ವಾಯುಭಾರ ಕುಸಿತದ ಪ್ರಭಾವ ಮುಗಿಯುತ್ತಿದ್ದಂತೆ ಪೂರ್ವ ಮುಂಗಾರು ಮಳೆಯು ಕೊನೆಯಾಗುತ್ತಿದೆ. ಇನ್ನು ಮುಂಗಾರು ಮಾರುತಗಳು ಆರಂಭವಾಗುವ ನಿರೀಕ್ಷೆಯಿದ್ದು, ಮೇ 24 ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಮೀನುಗಾರರು ಸಮುದ್ರಕ್ಕೆ ಹೋಗುವಾಗ ಎಚ್ಚರಿಕೆ ವಹಿಸುವುದು ಒಳ್ಳೆಯದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೇ 24 ರವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ.
24 ರಂದು ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್, ಮೇ 25,26 ರಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್ ನೀಡಲಾಗಿದೆ. ಜೂನ್ ಮೊದಲ ವಾರದಿಂದ ಮುಂಗಾರು ಪ್ರಾರಂಭವಾಗಲಿದ್ದು, ಇದಕ್ಕೂ ಮುನ್ನ ಬೀಳುತ್ತಿರುವ ಮುಂಗಾರು ಪೂರ್ವದ ಮಳೆಯೇ ರೆಡ್ ಅಲರ್ಟ್ನೊಂದಿಗೆ ಸುರಿಯಲಾರಂಭಿಸಿದ್ದು, ಜೊತೆಗೆ ಆರಂಭದಲ್ಲೇ ಖೈರೆ ಬಳಿ ಗುಡ್ಡ ಕುಸಿತಕ್ಕೆ ‘ನಾಂದಿ ಹಾಡಿರುವುದು ಜಿಲ್ಲೆಯ ಜನರು ಭಯಭೀತರಾಗಿದ್ದಾರೆ.
ಬ್ಯುರೋ ರಿಪೋರ್ಟ ವಿಸ್ಮಯ ನ್ಯೂಸ್