Join Our

WhatsApp Group
Important
Trending

ಅಕ್ರಮವಾಗಿ ಜಾನುವಾರು ಸಾಗಾಟ: ವಾಹನ ಸಮೇತ 19 ಜಾನುವಾರುಗಳ ರಕ್ಷಣೆ

ಭಟ್ಕಳ: ಹೊನ್ನಾವರ ಕಡೆಯಿಂದ ಭಟ್ಕಳದ ಕಡೆಗೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ, ಹಿಂಸಾತ್ಮಕವಾಗಿ ಕಟ್ಟಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರಾಲಿ ಚೆಕ್‌ಪೋಸ್ಟ್ ನಲ್ಲಿ ಬೆಳಗಿನ ಜಾವ ಕಾರ್ಯಾಚರಣೆ ನಡೆಸಿದ ಪಿ.ಎಸ್.ಐ ಭರಮಪ್ಪ ಬೆಳಗಲಿ ಅವರ ತಂಡ, ವಾಹನ ಸಮೇತ 19 ಜಾನುವಾರುಗಳನ್ನು ರಕ್ಷಿಸಿದೆ.

ಆರೋಪಿಗಳು ಹಾವೇರಿ ಮತ್ತು ಗದಗ ಮೂಲದವರು ಎಂದು ತಿಳಿದುಬಂದಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪಿ.ಎಸ್.ಐ ಭರಮಪ್ಪ ಬೆಳಗಲಿ ದೂರನ್ನು ನೀಡಿದ್ದಾರೆ.ಕಾರ್ಯಚರಣೆ ಯಲ್ಲಿ ಪೋಲಿಸ್ ಸಿಬ್ಬಂದಿಯಾದ ಅಣ್ಣಪ್ಪ ನಾಯ್ಕ,ರಾಮಯ್ಯ ನಾಯ್ಕ,ಬಸವನಗೌಡ ಪಾರ್ಟಿಲ್,ಚಾಲಕ ದೇವರಾಜ್ ಮೊಗೇರ ಉಪಸ್ಥಿತಿ ಇದ್ದರು

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button