Join Our

WhatsApp Group
Important
Trending

ದೇವಾಲಯ ಕಳ್ಳತನ: 24 ಗಂಟೆಯೊಳಗೆ ಆರೋಪಿಯ ಬಂಧನ

ಭಟ್ಕಳ: ಹೆಬಳೆ ತೆಂಗಿನಗುoಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ ಗ್ರಾಮೀಣ ಪೊಲೀಸರು 24 ಗಂಟೆ ಕಳೆಯುವುದರೊಳಗಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಕಳ್ಳತನಕ್ಕೆ ಬಳಸಿದ ಬೈಕ್ ಮತ್ತು ಕಳವು ಮಾಡಿದ್ದ 1.10 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಹನೀಫಾಬಾದ್‌ನ ನೆರ್ಲೆಸರ ನಿವಾಸಿ ಸೈಯದ್ ಯೂನುಸ್ ಅಹ್ಮದ್ ಎಂದು ಗುರುತಿಸಲಾಗಿದೆ.

ದೇವಸ್ಥಾನದ ಬಾಗಿಲನ್ನು ಮುರಿದು ಒಳನುಗ್ಗಿದ ಆರೋಪಿ, ದೇವಸ್ಥಾನದಲ್ಲಿದ್ದ ತಾಮ್ರದ ಕೊಡ, ಹರಿವಾಣ ಸೇರಿದಂತೆ ಪೂಜಾ ಪರಿಕರಗಳನ್ನು ಕದ್ದೊಯ್ದು ಪರಾರಿಯಾಗಿದ್ದ. ಈ ದೇವಸ್ಥಾನವು ತೆಂಗಿನಗುAಡಿ ನಿವಾಸಿ ಮಾದೇವ ಅಚ್ಯುತ್ ಪ್ರಭು ಅವರ ಕುಟುಂಬಕ್ಕೆ ಸೇರಿದ್ದಾಗಿದ್ದು, ಕುಟುಂಬದ ಮಹಿಳೆಯೊಬ್ಬರು ಪೂಜೆಗೆ ಬಂದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಕುಟುಂಬದವರಿಗೆ ಮತ್ತು ಊರ ಜನರಿಗೆ ಮಾಹಿತಿ ನೀಡಿದ್ದಾರೆ. ಜನ ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದನು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button