Important
Trending

ಗ್ರಾಪಂ ಮಾಜಿ ಉಪಾಧ್ಯಕ್ಷ ನಿತ್ಯಾನಂದ ಗಾಂವಕರ ವಿಧಿವಶ: ಸಮಾಜ ಮುಖಿ ಚಿಂತನೆಯ, ಜನಪರ ಕಾಳಜಿಯ ಸರಳ ಜೀವ ಇನ್ನಿಲ್ಲ

ಅಂಕೋಲಾ : ಬೆಲೇಕೇರಿ ಗ್ರಾ.ಪಂ ಮಾಜಿ ಉಪಾಧ್ಯಕ್ಷರಾಗಿದ್ದ ನಿತ್ಯಾನಂದ ಜಿ ಗಾಂಪಕರ (59) ವಿಧಿವಶರಾಗಿದ್ದಾರೆ. ಉತ್ತಮ ಕೃಷಿಕರಾಗಿ, ಸ್ಥಳೀಯ ಗ್ರಾಪಂ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಶ್ರೀ ಮಹಾದೇವ ಪ್ರತಿಭಾ ಪುರಸ್ಕಾರ ಸಮಿತಿ ಸೇರಿದಂತೆ ಊರಿನ ಹಾಗೂ ತಾಲೂಕಿನ ಹತ್ತಾರು ಸಂಘಟನೆಗಳ ಸದಸ್ಯರಾಗಿ ಪದಾಧಿಕಾರಿಯಾಗಿ, ಕಲೆ, ಸಾಹಿತ್ಯ, ಕ್ರೀಡೆ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನಿತ್ಯಾನಂದ ಗಾಂವಕರ,ತಮ್ಮ ಸರಳ ವ್ಯಕ್ತಿತ್ವದಿಂದ ಹಲವರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು.

ಇತ್ತೀಚೆಗೆ ಅವರನ್ನು ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆ ಮತ್ತಿತರ ಕಾರಣಗಳಿಂದ ಮಾನಸಿಕವಾಗಿಯೂ ಕುಗ್ಗಿದ್ದರು ಎನ್ನಲಾಗಿದ್ದು, ಅಂತಿಮವಾಗಿ ಸಾವಿಗೆ ಶರಣಾಗಿದ್ದಾರೆ.

ಇವರ ಆಕಸ್ಮಿಕ ಅಗಲುವಿಕೆಗೆ ಹಲವು ಗಣ್ಯರು, ಊರ ನಾಗರಿಕರು ತೀವೃ ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ ಭಾರತಿ, ಪುತ್ರ ಶಶಾಂಕ ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದು, ಕುಟುಂಬ ವರ್ಗ ಹಾಗೂ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button