Join Our

WhatsApp Group
Important
Trending

ಬಸ್ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ದನ: ಎರಡು ತಾಸು ಬಳಿಕ ಹೊರಟ ಬಸ್

ಹೊನ್ನಾವರ: ತಾಲೂಕಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ಕೆಳಗೆ ದನವೊಂದು ಸಿಕ್ಕಿಹಾಕೊಂಡಿದ್ದು, ಹೊರ ಬರಲಾರದೇ ಓದ್ದಾಟ ಅನುಭವಿಸಿದೆ. ಮುಂಜಾನೆ ಬಸ್ ಕೆಳಗೆ ಮಲಗಿಕೊಂಡಿದ್ದ ಆಕಳನ್ನು, ನೋಡಿದ ಚಾಲಕರು, ಬಸ್ ಹೊರಡದೇ ನಿಲ್ಲಿಸಬೇಕಾಗಿರುವ ಪರಿಸ್ಥಿತಿ ಬಂತು. ಈ ಬಸ್ ಹೊನ್ನಾವರದಿಂದ ಅನಿಲಗೋಡ ತೆರಳುವ ಬಸ್ ಆಗಿದ್ದು, ಸುಮಾರು 10 ಗಂಟೆಗೆ ತೆರಳಬೇಕಾಗುತ್ತಿತ್ತು. ಆದರೆ ಆಕಳು ಸಿಕ್ಕಿಹಾಕಿಕೊಂಡಿದ್ದದಿoದ ಬಸ್ ಹೊರಡದೇ ಅಲ್ಲೇ ನಿಲ್ಲಿಸಿಡಬೇಕಾಯಿತು. ಸ್ಥಳೀಯರು, ಹಾಗೂ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು ಎಷ್ಟೇ ಪ್ರಯತ್ನ ಮಾಡಿದರೂ ಸಹ ಹೊರತೆಗೆಯಲು ಕಷ್ಟಪಡಬೇಕಾಯಿತು.

ಆಕಳಿಗೆ ಹಣ್ಣುಗಳನ್ನು ನೀಡಿ, ರೋಪ್ ನಿಂದ ಕಟ್ಟಿ ಹೊರತರಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಅಗ್ನಿಶಾಮಕ ದಳದವರನ್ನು ಪೋನಾಯಿಸಿ ಕರೆದಾಗ ಸ್ಥಳಕ್ಕೆ ತಕ್ಷಣ ಸ್ಪಂದಿಸಿದ ಅಗ್ನಿಶಾಮಕ ದಳದವರು ಬಸ್ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ಆಕಳನ್ನು ರೋಪ್ ಮೂಲಕ ಹೊರತೆಗೆದರು. ಅಗ್ನಿಶಾಮಕದ ದಳದ ಠಾಣಾಧಿಕಾರಿ ಪ್ರದೀಪ ನಾಯ್ಕ , ಹನುಮಂತ, ನಾಗರಾಜ, ಶ್ರೀಧರ, ಕಿರಣ ಸಿಬ್ಬಂದಿಗಗಳು ಇದ್ದರು. ಅಗ್ನಿಶಾಮಕದವರ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು. ಇನ್ನೂ ಸಾರ್ವಜನಿಕರು ಸುಮಾರು 2 ತಾಸು ಬಸ್ ನಿಲ್ದಾಣದಲ್ಲೇ ಕಾಲಕಳೆಯುವಂತಾಯಿತು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button