- ಮಳೆಯ ಅಬ್ಬರದ ನಡುವೆಯೇ ಕರೊನಾ ವಾರಿಯರ್ಸಗಳಿಗೆ ಸವಾಲು
- ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ನಂಜು?
ಅಂಕೋಲಾ : ತಾಲೂಕಿನಲ್ಲಿ ರವಿವಾರ 18 ಹೊಸ ಕೊವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ತಾಲೂಕಿನ ಈವರೆಗಿನ ಒಟ್ಟೂ ಸೋಂಕಿತರ ಸಂಖ್ಯೆ 500 ರ ಗಡಿದಾಟಿದಂತಾಗಿದೆ.
ಸೋಂಕಿನಿಂದ ಗುಣಮುಖರಾದ 4 ಜನರನ್ನು ಇಂದು ಬಿಡುಗಡೆಗೊಳಿಸಲಾಗಿದ್ದು, 111 ಮಂದಿಯ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಹೋಂ ಐಸೋಲೇಶನ್‍ನಲ್ಲಿರುವ 60 ಮಂದಿ ಸಹಿತ ಒಟ್ಟೂ 106 ಪ್ರಕರಣಗಳು ಸಕ್ರಿಯವಾಗಿದೆ.
ಪ್ರಕರಣಗಳು ಎಲ್ಲೆಲ್ಲಿ : ಅವರ್ಸಾ, ಬಾಳೆಗುಳಿ, ಅಂಬಾರಕೊಡ್ಲ, ಕನಸಿಗದ್ದೆ, ಬೆಳಂಬಾರ, ಪೂಜಗೇರಿ, ತೆಂಕಣಕೇರಿ, ಅಡಿಗೋಣ, ಪುರ್ಲಕ್ಕಿಬೇಣ, ಬೊಬ್ರುವಾಡ, ಮಠಾಕೇರಿ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಸೋಂಕಿನ ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ.
ಧಾರಾಕಾರಾವಾಗಿ ಸುರಿಯುತ್ತಿರುವ ಮಳೆ ಕರೋನಾ ವಾರಿಯರ್ಸಗಳ ಸೇವೆಗೆ ಸವಾಲಾಗಿದೆ. ಆದರೂ ಆರೋಗ್ಯ ಇಲಾಖೆ ಮತ್ತಿತರ ಸಿಬ್ಬಂದಿಗಳು ತಮ್ಮ ಅವಿರತ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ