ಮಾಹಿತಿ
Trending

ಜಿಲ್ಲೆಯಲ್ಲಿಂದು 107 ಕರೊನಾ ಕೇಸ್

140 ಮಂದಿ ಗುಣಮುಖರಾಗಿ ಬಿಡುಗಡೆ
ಇಬ್ಬರ ಸಾವು
ಸೋಂಕಿತರ ಸಂಖ್ಯೆ 8,217ಕ್ಕೆ ಏರಿಕೆ

[sliders_pack id=”1487″]

ಕಾರವಾರ: ಜಿಲ್ಲೆಯಲ್ಲಿ ಇಂದು 107 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರ 41, ಶಿರಸಿ 16, ಕುಮಟಾ 15, ಭಟ್ಕಳ 10, ಜೋಯಿಡಾ 9, ಹಳಿಯಾಳ 6, ಅಂಕೋಲಾ 4, ಹೊನ್ನಾವರ 4, ಯಲ್ಲಾಪುರದಲ್ಲಿ 2 ಸೋಂಕಿತ ಪ್ರಕರಣ ದಾಖಲಾಗಿದೆ.


ಇದೇ ವೇಳೆ, ಇಂದು 140 ಮಂದಿ ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾರವಾರ 31, ಅಂಕೋಲಾ 9, ಕುಮಟಾ 52, ಹೊನ್ನಾವರ 28, ಭಟ್ಕಳ 1, ಶಿರಸಿ 1, ಹಳಿಯಾಳದಲ್ಲಿ 13 ಸೇರಿ ಒಟ್ಟು 140 ಮಂದಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿಂದು ಇಬ್ಬರ ಸಾವು:


ಇಂದು 107 ಕೇಸ್ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 8,217ಕ್ಕೆ ತಲುಪಿದೆ. ಹೋಮ್ ಕ್ವಾರಂಟೈನ್ ನಲ್ಲಿ 1,150 ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಕರೊನಾ ಸೋಂಕಿತರ ಸಂಖ್ಯೆ 2102ಕ್ಕೆ ತಲುಪಿದೆ.


ಕಾರವಾರದಲ್ಲಿ 1 ಹಾಗೂ ಕುಮಟಾ 1 ಸೇರಿ ಜಿಲ್ಲೆಯಲ್ಲಿ ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು , ಈ ಮೂಲಕ ಸಾವಿನ ಸಂಖ್ಯೆ 103ಕ್ಕೆ ಏರಿಕೆಯಾಗಿದೆ.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button