Focus News
Trending

ಅಂಕೋಲಾದಲ್ಲಿ 18 ಕೇಸ್ : 500ರ ಗಡಿ ದಾಟಿದ ಒಟ್ಟು ಸೋಂಕಿತರು

  • ಮಳೆಯ ಅಬ್ಬರದ ನಡುವೆಯೇ ಕರೊನಾ ವಾರಿಯರ್ಸಗಳಿಗೆ ಸವಾಲು
  • ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ನಂಜು?

ಅಂಕೋಲಾ : ತಾಲೂಕಿನಲ್ಲಿ ರವಿವಾರ 18 ಹೊಸ ಕೊವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ತಾಲೂಕಿನ ಈವರೆಗಿನ ಒಟ್ಟೂ ಸೋಂಕಿತರ ಸಂಖ್ಯೆ 500 ರ ಗಡಿದಾಟಿದಂತಾಗಿದೆ.

ಸೋಂಕಿನಿಂದ ಗುಣಮುಖರಾದ 4 ಜನರನ್ನು ಇಂದು ಬಿಡುಗಡೆಗೊಳಿಸಲಾಗಿದ್ದು, 111 ಮಂದಿಯ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಹೋಂ ಐಸೋಲೇಶನ್‍ನಲ್ಲಿರುವ 60 ಮಂದಿ ಸಹಿತ ಒಟ್ಟೂ 106 ಪ್ರಕರಣಗಳು ಸಕ್ರಿಯವಾಗಿದೆ.


ಪ್ರಕರಣಗಳು ಎಲ್ಲೆಲ್ಲಿ : ಅವರ್ಸಾ, ಬಾಳೆಗುಳಿ, ಅಂಬಾರಕೊಡ್ಲ, ಕನಸಿಗದ್ದೆ, ಬೆಳಂಬಾರ, ಪೂಜಗೇರಿ, ತೆಂಕಣಕೇರಿ, ಅಡಿಗೋಣ, ಪುರ್ಲಕ್ಕಿಬೇಣ, ಬೊಬ್ರುವಾಡ, ಮಠಾಕೇರಿ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಸೋಂಕಿನ ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ.

ಧಾರಾಕಾರಾವಾಗಿ ಸುರಿಯುತ್ತಿರುವ ಮಳೆ ಕರೋನಾ ವಾರಿಯರ್ಸಗಳ ಸೇವೆಗೆ ಸವಾಲಾಗಿದೆ. ಆದರೂ ಆರೋಗ್ಯ ಇಲಾಖೆ ಮತ್ತಿತರ ಸಿಬ್ಬಂದಿಗಳು ತಮ್ಮ ಅವಿರತ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Related Articles

Back to top button