ಕುಮಟಾದಲ್ಲಿ ಎಂಟು ಪಾಸಿಟಿವ್
ಮಂಕಿ ಪೊಲೀಸ್ ಠಾಣೆಗೂ ಅಂಟಿದ ಸೋಂಕು
ಕುಮಟಾ: ತಾಲೂಕಿನಲ್ಲಿ ಇಂದು 8 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಹೊಸಹೆರವಟ್ಟಾ, ಗುಜರಗಲ್ಲಿ, ಕಾಗಲ್ ಮಾನೀರ್, ಉಪ್ಪಿನಪಟ್ಟಣ, ಕಾಗಲ್, ಬೆಟ್ಗೇರಿ, ನೆಲ್ಲಿಕೇರಿ ಭಾಗದಲ್ಲಿ ಸೋಂಕಿತ ಪ್ರಕರಣ ದಾಖಲಾಗಿದೆ.
ಹೊಸಹೆರವಟ್ಟಾ 34 ವರ್ಷದ ಯುವಕ, 63 ವರ್ಷದ ಪುರುಷ, ಗುಜರಗಲ್ಲಿಯ 38 ವರ್ಷದ ಪುರುಷ, ಕಾಗಲ್ ಮಾನೀರ್ ನ 12 ವರ್ಷದ ಬಾಲಕಿ, ಬೆಟ್ಗೇರಿಯ 70 ವರ್ಷದ ವೃದ್ಧ, ಕಾಗಲ್ ನ 84 ವರ್ಷದ ವೃದ್ಧ, ಉಪ್ಪಿನಪಟ್ಟಣದ 39 ವರ್ಷದ ಯುವಕ, ನೆಲ್ಲಿಕೇರಿಯ 31 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಇಂದು 8 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 943 ಕ್ಕೆ ಏರಿಕೆಯಾಗಿದೆ.
ಪೊಲೀಸ್ ಠಾಣೆ ಸಿಬ್ಬಂದಿಗೂ ಅಂಟಿದ ಸೋಂಕು:
ಹೊನ್ನಾವರ: ತಾಲೂಕಿನಲ್ಲಿ ಇಂದು 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ತಾಲೂಕಾ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಕುಟುಂಬದ ನಾಲ್ವರು ಮತ್ತು ಮಂಕಿ ಪೋಲಿಸ್ ಸಿಬ್ಬಂದಿ ಸೇರಿ ಒಟ್ಟು 5 ಜನರಲ್ಲಿ ಇಂದು ಕರೋನಾ ಪಾಸಿಟಿವ್ ದೃಢಪಟ್ಟಿದೆ.
ತಾಲೂಕಾ ಆಸ್ಪತ್ರೆಯ 54 ವರ್ಷದ ಮಹಿಳಾ ಸಿಬ್ಬಂದಿ ಮತ್ತು ಅವರ ಪತಿ 56 ವರ್ಷದ ಪುರುಷ, 14 ಮತ್ತು 12, ವರ್ಷದ ಇಬ್ಬರು ಬಾಲಕರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ.
29 ವರ್ಷದ ಮಂಕಿಯ ಪೋಲಿಸ್ ಸಿಬ್ಬಂದಿಗು ಸೋಂಕು ಪತ್ತೆಯಾಗಿದೆ. ಇಂದು ತಾಲೂಕಾ ಆಸ್ಪತ್ರೆಯಿಂದ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ 20 ಜನರು ಚಿಕಿತ್ಸೆ ಪಡೆಯುತ್ತಿದರೆ, ಮನೆಯಲ್ಲಿ 175 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ