ಉತ್ತರ ಕನ್ನಡದಲ್ಲಿ ಇಂದು 180 ಕರೊನಾ ಕೇಸ್ ದಾಖಲು

24 ಮಂದಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8,397ಕ್ಕೆ ಏರಿಕೆ

[sliders_pack id=”1487″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 180 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಕಾರವಾರದಲ್ಲಿ 44, ಅಂಕೋಲಾ 19, ಕುಮಟಾ 50, ಹೊನ್ನಾವರ 5, ಭಟ್ಕಳ 3, ಶಿರಸಿ 29, ಮುಂಡಗೋಡ 23, ಹಳಿಯಾಳದಲ್ಲಿ ಏಳು ಪ್ರಕರಣ ಪತ್ತೆಯಾಗಿದೆ. ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 24 ಮಂದಿ ಬಿಡುಗಡೆಯಾಗಿದ್ದಾರೆ.

ಕಾರವಾರದಲ್ಲಿ 10, ಹೊನ್ನಾವರ 2, ಶಿರಸಿ 1, ಹಳಿಯಾಳ 8, ಜೋಯ್ಡಾದಲ್ಲಿ ಮೂವರು ಡಿಸ್ಚಾರ್ಜ್ ಆಗಿದ್ದಾರೆ. ಇಂದು 180 ಕೇಸ್ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8,397ಕ್ಕೆ ಏರಿಕೆಯಾಗಿದೆ. 1,095 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಜಿಲ್ಲೆಯಲ್ಲಿ ಯಾವುದೇ ಸಾವಿನ ಸಂಖ್ಯೆ ದಾಖಲಾಗಿಲ್ಲವಾಗಿದೆ.

ಕುಮಟಾ ತಾಲೂಕಿನಲ್ಲಿ ನಿನ್ನೆ ಬರೋಬ್ಬರಿ 42 ಸೋಂಕಿತ ಪ್ರಕರಣ ದಾಖಲಾದ ಕುರಿತು ವಿಸ್ಮಯ ಟಿ.ವಿ ಮಾಹಿತಿ ನೀಡಿತ್ತು. ಆದರೆ, ಹೆಲ್ತ್ ಬುಲೆಟಿನ್ ನಲ್ಲಿ ಕುಮಟಾ 15 ಕೇಸ್ ದಾಖಲಾದ ಕುರಿತು ಮಾಹಿತಿ ಬಂದಿತ್ತು. ನಿನ್ನೆಯ ಹಲವು ಪ್ರಕರಣಗಳು ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾಗಿದೆ. ಹೆಲ್ತ್ ಬುಲೆಟಿನ್ ನಲ್ಲಿ ಕೆಲವೊಂದು ವೇಳೆ ಮುರುದಿನ ದಾಖಲಾಗುವ ಸಾಧ್ಯತೆ ಇರುವುದರಿಂದ ಈ ವ್ಯತ್ಯಾಸವಾಗುತ್ತಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version