ಕುಮಟಾ, ಹೊನ್ನಾವರದ ಇಂದಿನ ಕರೊನಾ ಮಾಹಿತಿ ಇಲ್ಲದೆ ನೋಡಿ

ಕುಮಟಾದಲ್ಲಿ ಇಂದು 33 ಸೋಂಕಿತರು ಪತ್ತೆ
ಹೊನ್ನಾವರ ತಾಲೂಕಿನಲ್ಲಿ 16 ಕೇಸ್ ದೃಢ
ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಮಾಹಾಮಾರಿ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 33 ಕರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ತಾಲೂಕಿನ ಮಣ್ಕಿಯಲ್ಲಿ 5, ಚಿತ್ರಗಿ 5, ಕೊಡ್ಕಣಿ 2, ಮಾಸೂರ್ 2, ಗೋಕರ್ಣ 2, ಹೆಗಡೆಯ ಚಿಟ್ಟೆಕಂಬಿ 3, ಹೆಬೈಲ್ 2, ದಿವಗಿ 2 ಸೇರಿದಂತೆ ಹೊಳೆಗದ್ದೆ, ಕಾಗಲ್, ಹನೆಹಳ್ಳಿ, ಹಿರೇಗುತ್ತಿ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.

ಹೆಗಡೆಯ 53 ವರ್ಷದ ಪುರುಷ, ಕೋಡ್ಕಣಿಯ 32 ವರ್ಷದ ಮಹಿಳೆ, 38 ವರ್ಷದ ಪುರುಷ, ಮಾಸೂರಿನ 32 ವರ್ಷದ ಮಹಿಳೆ, 95 ವರ್ಷದ ವೃದ್ಧೆ, ಬರ್ಗಿಯ 26 ವರ್ಷದ ಯುವಕ, ಚಿತ್ರಗಿಯ 77 ವರ್ಷದ ವೃದ್ಧ, 45 ವರ್ಷದ ಪುರುಷ, 47 ವರ್ಷದ ಪುರುಷ, 51 ವರ್ಷದ ಪುರುಷ, 4 ವರ್ಷದ ಮಗುವಿಗೆ ಸೋಂಕು ದೃಢಪಟ್ಟಿದೆ.©Copyright reserved by Vismaya tv

ನಾಗದೇವಿ ರಸ್ತೆ ಸಮೀಪದ 50 ವರ್ಷದ ಮಹಿಳೆ, ಹಿರೇಗುತ್ತಿಯ 68 ವರ್ಷದ ವೃದ್ಧ, ಗೊನೆಹಳ್ಳಿಯ 33 ವರ್ಷದ ಮಹಿಳೆ, 7 ವರ್ಷದ ಬಾಲಕ, ಮಣ್ಕಿಯ 80 ವರ್ಷದ ವೃದ್ಧ, 10 ವರ್ಷದ ಬಾಲಕ, 40 ವರ್ಷದ ಮಹಿಳೆ, 14 ವರ್ಷದ ಬಾಲಕಿ, 50 ವರ್ಷದ ಪುರುಷ, ಹನೆಹಳ್ಳಿಯ 55 ವರ್ಷದ ಮಹಿಳೆ, ಗೋಕರ್ಣದ 42 ವರ್ಷದ ಪುರುಷ, 20 ವರ್ಷದ ಯುವತಿ, ದಿವಗಿಯ 25 ವರ್ಷದ ಯುವಕ, 55 ವರ್ಷದ ಮಹಿಳೆಗೂ ಪಾಸಿಟಿವ್ ಬಂದಿದೆ.

ಹೆಬೈಲ್‌ನ 75 ವರ್ಷದ ವೃದ್ಧೆ, 58 ವರ್ಷದ ಪುರುಷ, ಮಾದನಗೇರಿಯ 36 ವರ್ಷದ ಮಹಿಳೆ, ಹೆಗಡೆ ಚಿಟ್ಟೆಕಂಬಿಯ 46 ವರ್ಷದ ಮಹಿಳೆ, 44 ವರ್ಷದ ಪುರುಷ, 24 ವರ್ಷದ ಯುವಕ, ಹೋಳೆಗದ್ದೆಯ 23 ವರ್ಷದ ಯುವತಿ, ಕಾಗಲ್ 55 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಇಂದು 33 ಪ್ರಕರಣ ಸೇರಿ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 982 ಕ್ಕೆ ಏರಿಕೆಯಾಗಿದೆ.

ಹೊನ್ನಾವರ ತಾಲೂಕಿನಲ್ಲಿ 16 ಕೇಸ್ ದೃಢ:

ಹೊನ್ನಾವರ: ತಾಲೂಕಿನಲ್ಲಿ ಇಂದು 16 ಕರೊನಾ ಕೇಸ್ ದಾಖಲಾಗಿದೆ. ಪಟ್ಟಣದಲ್ಲಿ-7 ದುರ್ಗಾಕೇರಿಯಲ್ಲಿ-5 ಗಾಂಧಿನಗರ-ಕೆಳಗಿನಪಾಳ್ಯದಲ್ಲಿ ತಲಾ ಒಂದು ಹಾಗು ಕರ್ಕಿಯಲ್ಲಿ-4 ಮಾಡಗೇರಿ-2 ಕಡತೋಕಾ-ಚಂದಾವರ- ಖರ್ವಾದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ©Copyright reserved by Vismaya tv

ಹೊನ್ನಾವರ ಪಟ್ಟಣದ ದುರ್ಗಾಕೇರಿಯ 32 ವರ್ಷದ ಯುವತಿ, 40 ವರ್ಷದ ಪುರುಷ, 47 ವರ್ಷದ ಮಹಿಳೆ, 15 ವರ್ಷದ ಬಾಲಕ, 5 ವರ್ಷದ ಬಾಲಕಿ, ಕೆಳಗಿನಪಾಳ್ಯದ 78 ವರ್ಷದ ಪುರುಷ, ಪ್ರಭಾತನಗರ ಗಾಂಧಿನಗರದ 78 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಗ್ರಾಮೀಣಭಾಗವಾದ ಕಡತೋಕಾದ 49 ವರ್ಷದ ಪುರುಷ, ಚಂದಾವರದ 60 ವರ್ಷದ ಪುರುಷ., ಮಾಡಗೇರಿಯ 58 ವರ್ಷದ ಪುರುಷ., 19 ವರ್ಷದ ಬಾಲಕ, ಖರ್ವಾದ 34 ವರ್ಷದ ಪುರುಷ, ಕರ್ಕಿಯ 39 ವರ್ಷದ ಮಹಿಳೆ, 14 ವರ್ಷದ ಬಾಲಕಿ, 8 ವರ್ಷದ ಬಾಲಕಿ, 80 ವರ್ಷದ ಪುರುಷ ಸೇರಿದಂತೆ ಒಟ್ಟು 16 ಜನರಲ್ಲಿ ಸೋಂಕು ಪತ್ತೆಯಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

ಸೆಲ್ಕೋ ಸೋಲಾರ್ ದೀಪ ಬಳಸಿ, ನಿಮ್ಮ ಮನೆ ಬೆಳಗಿಸಿ

ಸೌರಶಕ್ತಿ ಅಂದರೆ ಕೇವಲ ಬೆಳಕಲ್ಲ
ಅದು ಸ್ವಾವಲಂಬಿ ಬದುಕಿಗೂ ದಾರಿ
ಇದು ಸೆಲ್ಕೋ ಸಂಸ್ಥೆಯ ಗುರಿ
ಸಂಪರ್ಕಿಸಿ: ದತ್ತಾರಾಮ ಭಟ್ಟ, ಮ್ಯಾನೇಜರ್
ಸೆಲ್ಕೋ ಸೋಲಾರ್, ಸನ್ಮಾನ ಹೊಟೇಲ್ ಹತ್ತಿರ
N.H 66, ಕುಮಟಾ
9880003735/9449360181

Exit mobile version