ಕುಮಟಾ ತಾಲೂಕಿನ ಶನಿವಾರದ ಕರೊನಾ ಮಾಹಿತಿ ಇಲ್ಲಿದೆ

ತಾಲೂಕಿನಲ್ಲಿ ಇಂದು ಕೇಸ್ ದಾಖಲು
ಸೋಂಕಿತರ ಸಂಖ್ಯೆ 1020ಕ್ಕೆ ಏರಿಕೆ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಶನಿವಾರ ಒಟ್ಟು 10 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶವಾದ ಕಾಗಲ್‌ನಲ್ಲಿ 3 ಪ್ರಕರಣ ಸೇರಿದಂತೆ ನೆಲ್ಲಿಕೇರಿ, ಮಿರ್ಜಾನ್, ಬೆಟ್ಗೇರಿ, ಹೆಗಡೆ, ಹೆರವಟ್ಟಾ, ಗೋಕರ್ಣ, ಕಲ್ಲಬ್ಬೆ ಭಾಗದಲ್ಲಿ ಕರೋನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ.

ನೆಲ್ಲಿಕೇರಿಯ 56 ವರ್ಷದ ಮಹಿಳೆ, ಮಿರ್ಜಾನ್‌ನ 47 ವರ್ಷದ ಪುರುಷ, ಬೆಟ್ಗೇರಿಯ 70 ವರ್ಷದ ವೃದ್ಧೆ, ಹೆಗಡೆಯ 40 ವರ್ಷದ ಪುರುಷ, ಹೆರವಟ್ಟಾದ 65 ವರ್ಷದ ಪುರುಷ, ಗೋಕರ್ಣದ 22 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ©Copyright reserved by Vismaya tv

ಕಾಗಲ್‌ನ 12 ವರ್ಷದ ಬಾಲಕಿ, 1 ವರ್ಷದ ಮಗು, 40 ವರ್ಷದ ಮಹಿಳೆ, ಕಲ್ಲಬ್ಬೆಯ 69 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆಯಾಗಿದೆ. ಇಂದು 10 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1020ಕ್ಕೆ ಏರಿಕೆಯಾಗಿದೆ.

ಶಿರಸಿಯಲ್ಲಿ 43 ಕೇಸ್ ದೃಢ:


ಶಿರಸಿ: ತಾಲೂಕಿನಲ್ಲಿ ಶುಕ್ರವಾರ 43 ಕೇಸ್ ದೃಢಪಟ್ಟಿದೆ. ಕುಳವೆ 1, ಬೆಟ್ಟಕೊಪ್ಪ 5, ಅಗಸೆ ಬಾಗಿಲು 1, ಅಯ್ಯಪ್ಪ ನಗರದಲ್ಲಿ 1, ಬಸವೇಶ್ವರ ಕಾಲೋನಿಯಲ್ಲಿ 1, ಕೋಟೆಗಲ್ಲಿಯಲ್ಲಿ 1, ಗಣೇಶ ನಗರ 1,ಬಾಪುಜಿ ನಗರ 1, ದುಂಡಶಿ ನಗರ 2, ರಾಯರಪೇಟೆ 1, ಮಾರುತಿ ಗಲ್ಲಿ 1, ಸಿಂಪಿಗಲ್ಲಿ 1, ನಿಲೇಕಣಿ 4, ಮುಸ್ಲಿಂ ಗಲ್ಲಿ 1, ವೀರಭದ್ರ ಗಲ್ಲಿಯಲ್ಲಿ 7, ಹನುಮಂತಿ 1, ಬನವಾಸಿ ರೋಡ್, ಕಂಚಿಗದ್ದೆ 1, ಬಿಸಲಕೊಪ್ಪ 1, ಮಾರಿಕಾಂಬಾ ನಗರ 2, ಪೋಲಿಸ್ ಕ್ವಾಟರ್ಸ್ 1, ಗೋಸಾವಿ ಕೆರೆ ಸೇರಿದಂತೆ ಹಲವೆಡೆ ಸೋಂಕು ಕಾಣಿಸಿಕೊಂಡಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Exit mobile version