Uttara Kannada
Trending

ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆ: ಸಾಧಕಿಗೆ ಸನ್ಮಾನ

ಛಾಯಾಗ್ರಹಕರ ಸಂಘದ ವತಿಯಿಂದ ಸನ್ಮಾನ

ಭಟ್ಕಳ : ತಾಲೂಕಿನಿಂದ ಇದೇ ಮೊದಲ ಬಾರಿಗೆ ಮಹಿಳಾ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿರುವ ತಾಲೂಕಿನ ಹಡೀನ ಗ್ರಾಮದ ನಿವಾಸಿ ಕುಮಾರಿ ಮಮತಾ ಶಂಕರ ನಾಯ್ಕ ಇವರಿಗೆ ಭಟ್ಕಳ ತಾಲೂಕಾ ಛಾಯಾಗ್ರಾಹಕರ ಸಂಘದ ವತಿಯಿಂದ ಗೌರವ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೌಟುಂಬಿಕ ಬಡತನದ ನಡುವೆಯು ಇವರ ಈ ಸಾಧನೆ ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದ್ದು ಭವಿಷ್ಯದಲ್ಲಿ ಇದಕ್ಕಿಂತ ಉನ್ನತ ಮಟ್ಟದಲ್ಲಿ ಸಾಧಿಸುವಂತಾಗಲಿ ಎನ್ನುವ ಹಾರೈಕೆಯೊಂದಿಗೆ ಇವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯ್ಕ ಪದಾಧಿಕಾರಿಗಳಾದ ಪ್ರವೀಣ್ ಶೆಟ್ಟಿ, ರಾಘವೇಂದ್ರ ಕೋಣೆಮನೆ, ರಾಘು‌ ಜೋಗಿ, ಕಿರಣ್ ಶೆಟ್ಟಿ, ಅರುಣ್ ನಾಯ್ಕ ಮತ್ತು ಇನ್ನಿತರ ಸದಸ್ಯರುಗಳು ಹಾಗೂ ಮಮತಾರವರ ತಂದೆತಾಯಿಗಳು ಜೊತೆಗಿದ್ದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button