ಭಾನುವಾರ ಬರೊಬ್ಬರಿ 49 ಕೇಸ್ ದಾಖಲು
ಅನಾರೋಗ್ಯದಿಂದ ಮೃತಪಟ್ಟ ದೀವಗಿ ವ್ಯಕ್ತಿಗೆ ಪಾಸಿಟಿವ್
ಕುಮಟಾ: ತಾಲೂಕಿನಲ್ಲಿ ರವಿವಾರ ಬರೊಬ್ಬರಿ 49 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಹಿರೇಗುತ್ತಿ, ಗೋಕರ್ಣ, ಬೆಟಗೇರಿ, ವಿವೇಕ ನಗರ, ಹೆಬೈಲ್, ವನ್ನಳ್ಳಿ, ಸಿದ್ದನಬಾವಿ ಹೊಲನಗದ್ದೆ, ಬಾಡಾ, ಕೊಡ್ಕಣಿ, ಮದ್ಗುಣಿ, ಹನೆಹಳ್ಳಿ, ಹೆರವಟ್ಟಾ, ಬಗ್ಗೋಣ, ಹೆಗಡೆ, ಬಸ್ತಿಪೇಟೆ, ದೇವಗುಂಡಿ, ದೇವರಹಕ್ಕಲ, ಕೊಪ್ಪಳಕರವಾಡಿ, ಚಿತ್ರಿಗಿ, ಗುಡ್‌ಕಾಗಲ್, ಕಲ್ಲಬ್ಬೆ, ಮಿರ್ಜಾನ್, ಮಾಸೂರು, ಸೇರಿದಂತೆ ತಾಲೂಕಿನ ಹಲವಾರು ಭಾಗಗಳಲ್ಲಿ ಕರೊನಾ ಕಾಣಿಸಿಕೊಂಡಿದೆ.
ತಾಲೂಕಿನ ಹಿರೆಗುತ್ತಿಯ 30 ವರ್ಷದ ಪುರುಷ, 52 ವರ್ಷದ ಪುರುಷ, ಗೋಕರ್ಣದ ದೇವರಬಾವಿಯ 10 ವರ್ಷದ ಬಾಲಕ, ಬೆಟಗೇರಿಯ 50 ವರ್ಷದ ಮಹಿಳೆ, ವಿವೇಕ ನಗರದ 66 ವರ್ಷದ ವೃದ್ದ, ಕತಗಾಲದ ಹೆಬೈಲ್‌ನ 36 ವರ್ಷದ ಪುರುಷ, ವನ್ನಳ್ಳಿಯ 31 ವರ್ಷದ ಪುರುಷ, ಸಿದ್ದನಬಾವಿಯ 57 ವರ್ಷದ ಪುರುಷ, 22 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.©Copyright reserved by Vismaya tv
ಹೊಲನಗದ್ದೆಯ 52 ವರ್ಷದ ಪುರುಷ, ಬಾಡದ 62 ವರ್ಷದ ವೃದ್ದೆ, 35 ವರ್ಷದ ಪುರುಷ, 67 ವರ್ಷದ ವೃದ್ದ, ಕೊಡ್ಕಣಿಯ 32 ವರ್ಷದ ಪುರುಷ, ಗೋಕರ್ಣದ 45 ವರ್ಷದ ಪುರುಷ, ಹಳಕಾರದ ಮದ್ಗುಣಿ 48 ವರ್ಷದ ಮಹಿಳೆ, ಹನೆಹಳ್ಳಿಯ 62 ವರ್ಷದ ವೃದ್ದೆ, 62 ವರ್ಷದ ವೃದ್ದ, ಹೆರವಟ್ಟಾದ 80 ವರ್ಷದ ವೃದ್ದ, 70 ವರ್ಷದ ವೃದ್ದೆ, 9 ವರ್ಷದ ಬಾಲಕಿ, 45 ಪುರುಷ, 30 ವರ್ಷದ ಮಹಿಳೆ, ಬಗ್ಗೋಣದ 40 ವರ್ಷದ ಪುರುಷ, ಕುಮಟಾ ಹೆಗಡೆಯ 75 ವರ್ಷದ ವೃದ್ದ, ಬಸ್ತಿಪೇಟೆಯ 53 ವರ್ಷದ ಪುರುಷ, 64 ವರ್ಷದ ವೃದ್ಧೆಗೆ ಪಾಸಿಟಿವ್ ಬಂದಿದೆ.
ಅನಾರೋಗ್ಯದಿoದ ಮೃತಪಟ್ಟ ದೀವಗಿ ವ್ಯಕ್ತಿಗೆ ಪಾಸಿಟಿವ್:
ದೇವಗುಂಡಿಯ 50 ವರ್ಷದ ಪುರುಷ, ದೇವರಹಕ್ಕಲದ 46 ವರ್ಷದ ಪುರುಷ, ಕೊಪ್ಪಳಕರವಾಡಿಯ 26 ವರ್ಷದ ಯುವತಿ, ಚಿತ್ರಿಗಿಯ 65 ವರ್ಷದ ವೃದ್ದ, 55 ವರ್ಷದ ಮಹಿಳೆ, ಗುಡ್‌ಕಾಗಲ್‌ನ 44 ವರ್ಷದ ಪುರುಷ, ಕಾಗಲ್ ಹಿಣಿಯ 49 ವರ್ಷದ ಮಹಿಳೆ, ಉಪ್ಪಾರಕೇರಿಯ 46 ವರ್ಷದ ಪುರುಷ, ಕಲ್ಲಬ್ಬೆಯ 19 ವರ್ಷದ ಯುವತಿ, ಮಿರ್ಜಾನದ 46 ವರ್ಷದ ಮಹಿಳೆ, ಮಾಸೂರಿನ 47 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.©Copyright reserved by Vismaya tv
ಕುಮಟಾ ಪಟ್ಟಣದ 46 ವರ್ಷದ ಪುರುಷ, 40 ವರ್ಷದ ಪುರುಷ, 48 ವರ್ಷದ ಮಹಿಳೆ, 50 ವರ್ಷದ ಪುರುಷ, 19 ವರ್ಷದ ಯುವಕ, 15 ವರ್ಷದ ಬಾಲಕ, 52 ವರ್ಷದ ಮಹಿಳೆ, 24 ವರ್ಷದ ಯುವತಿ, 52 ವರ್ಷದ ಮಹಿಳೆ, 80 ವರ್ಷದ ವೃದ್ಧ, 75 ವರ್ಷದ ವೃದ್ಧೆಗೆ ಪಾಸಿಟಿವ್ ಬಂದಿದೆ.
ಇoದು 49 ಪ್ರಕರಣ ದಾಖಲಾದ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1069 ಕ್ಕೆ ಏರಿಕೆಯಾಗಿದೆ. ಕುಮಟಾದ ದೀವಗಿಯ ವ್ಯಕ್ತಿ ಅನಾರೋಗ್ಯದ ನಿಮಿತ್ತ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಮೃತ ದೇಹವನ್ನು ಕೋವಿಡ್ ಚಿಕಿತ್ಸೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ.
ವಿಸ್ಮಯ ನ್ಯೂಸ್ ಕುಮಟಾ