ಮಾಹಿತಿ
Trending

ಹೊನ್ನಾವರ ತಾಲೂಕಿನಲ್ಲಿ ಇಂದು 11 ಪಾಸಿಟಿವ್

21 ಜನರು ಸೋಂಕಿನಿoದ ಗುಣಮುಖರಾಗಿ ಬಿಡುಗಡೆ
121 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ

ಹೊನ್ನಾವರ: ತಾಲೂಕಿನಲ್ಲಿ ಇಂದು 11 ಕರೊನಾ ಪಾಸಿಟಿವ್ ಪ್ರಕರಣ ದೃಢವಾಗಿದೆ. ಪಟ್ಟಣದಲ್ಲಿ -3 ಗಾಂಧಿನಗರ- ಕೆಳಗಿನಪಾಳ್ಯ, ಕೆಎಚ್‌ಬಿ ಕಾಲೋನಿಯಲ್ಲಿ ತಲಾ ಒಂದೊoದು ಪ್ರಕರಣ ಪತ್ತೆಯಾಗಿದೆ. ಮಂಕಿ ಕೋಪ್ಪದಮಕ್ಕಿಯಲ್ಲಿ 3, ಖರ್ವಾ- ಬಳ್ಕೂರ- ಸಾಲಕೋಡ- ಚಂದಾವರದಲ್ಲಿ ತಲಾ ಒಂದೊoದು ಪಾಸಿಟಿವ್ ದೃಢಪಟ್ಟಿದೆ.


ಪಟ್ಟಣದ ಗಾಂಧಿನಗರದ 57 ವರ್ಷದ ಪುರುಷ, ಕೆಳಗಿನಪಾಳ್ಯದ 38 ವರ್ಷದ ಪುರುಷ, ಕೆ.ಎಚ್.ಬಿ.ಕಾಲೂನಿಯ 48 ವರ್ಷದ ಪುರುಷ, ಗ್ರಾಮೀಣ ಭಾಗವಾದ ಖರ್ವಾದ 61 ವರ್ಷದ ಪುರುಷ, ಬಳಕೂರಿನ 32 ವರ್ಷದ ಮಹಿಳೆ, ಸಾಲ್ಕೋಡ್ ದ 25 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.


ಸಂಶಿಯ 30 ವರ್ಷದ ಯುವಕ, ಚಂದಾವರದ 50 ವರ್ಷದ ಪುರುಷ, ಮಂಕಿ ಕೊಪ್ಪದಮಕ್ಕಿ 60 ವರ್ಷದ ಮಹಿಳೆ, 42 ವರ್ಷದ ಪುರುಷ ಹಾಗೂ 38 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.

ಇದೇ ವೇಳೆ ಇಂದು 21 ಜನರು ಸೋಂಕಿನಿoದ ಗುಣಮುಖರಾಗಿ, ಬಿಡುಗಡೆಯಾಗಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ 15 ಜನರು ಚಿಕಿತ್ಸೆ ಪಡೆಯುತ್ತಿದ್ದು, 121 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು

Related Articles

Back to top button