ಇತ್ತೀಚಿನ ದಿನಗಳಲ್ಲಿ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ತೋರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಪ್ರಮಾಣವನ್ನು ನಗರ ಪ್ರದೇಶದಲ್ಲಿ 1 ಸಾವಿರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಹಿರಿಯ ಅಧಿಕಾರಿಗಳ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು, ಈ ಸಂಬoಧ ಮುಖ್ಯಮಂತ್ರಿಗಳೊoದಿಗೆ ಚರ್ಚಿಸಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವರ ಡಾ.ಕೆ.ಸುಧಾಕರ್ ಅವರು ಹೇಳಿದರು.
ಪೂರ್ತಿಯಾಗಿ ಮಾಸ್ಕ್ ಧರಿಸದವರಿಗೂ ಸಹ ದಂಡ ಅನ್ವಯವಾಗಲಿದೆ. ಇನ್ನೂ ಅಂಗಡಿ ಮುಂಗಟ್ಟುಗಳ ಎದುರು ಸಾಮಾಜಿಕ ಅಂತರ ಕಾಯ್ದುಗೊಳ್ಳೋದು ಕಡ್ಡಾಯವಾಗಿದೆ. ಅಂಗಡಿ ಮುಂಗಟ್ಟುಗಳ ಬಳಿ ಗ್ರಾಹಕರು, ಅಂಗಡಿಯವರು 6 ಅಡಿಗಳ ಅಂತರ ಕಾಯ್ದುಗೊಳ್ಳಬೇಕು. ಹೀಗೆ ಅಂತರ ಕಾಯ್ದುಕೊಳ್ಳದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಅಣ್ಣನಿಂದಲೇ ತಮ್ಮನ ಹತ್ಯೆ: ಕೊಲೆ ಮಾಡಿ ಶವದ ಮುಂದೆ ಬೀಡಿ ಸೇದುತ್ತಾ ಕುಳಿತ ಆರೋಪಿ
- ಕುಮಟಾದ ಐಎಂಎ ವೈದ್ಯರು ಮತ್ತು ಪದಾಧಿಕಾರಿಗಳ ಸಭೆ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತುರ್ತು ಅಗತ್ಯತೆ ಬಗ್ಗೆ ಸಹಮತ
- ಆತಂಕ ಮೂಡಿಸಿದ್ದ 14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ : ತಾಸುಗಟ್ಟಲೆ ಕಾರ್ಯಾಚರಣೆ
- ಕಿರು ಸೇತುವೆಯಿಂದ ಜಿಗಿದು ನೇಣಿಗೆ ಶರಣಾದ ಯುವಕ ?
- ಅಡಿಕೆ ವಕಾರಿ ಶೆಟರ್ ನ ಬೀಗ ಮುರಿದ ಕಳ್ಳರು: 4 ಲಕ್ಷ ರೂಪಾಯಿ ಮೌಲ್ಯದ ಚಾಲಿ ಕಳ್ಳತನ