Big News
Trending

ಇಲ್ಲಿನ ಮೂಲನಿವಾಸಿಗಳ ಮೇಲೆ ಅರಣ್ಯಸಿಬ್ಬಂದಿಗಳಿಂದ ನಿರಂತರ ದೌರ್ಜನ್ಯ?

ಸಾರ್ವಜನಿಕರಿಂದ ಕೇಳಿಬರುತ್ತಿದೆ ಆಕ್ರೋಶದ ಧ್ವನಿ
ಅರಣ್ಯ ರಕ್ಷಣೆ ಸೋಗಿನಲ್ಲಿ ನಿರಂತರವಾಗಿ ನಡೆಯುತ್ತಿದ್ಯಾ ದಬ್ಬಾಳಿಕೆ?

ಜೊಯಿಡಾ: ತಾಲೂಕಿನ ಮೂಲನಿವಾಸಿಗಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ನಿರಂತರವಾಗಿ ದೌರ್ಜನ್ಯ ಎಸಗಲಾಗುತ್ತಿದೆ ಎನ್ನು ಕೂಗು ಇತ್ತಿಚೆಗೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಇಲ್ಲಿನ ಕುಣಬಿಗರು ಹಿರಿಯರ ಕಾಲದಿಂದ ವಂಶ ಪಾರಂಪರಿಕವಾಗಿ ಮಾಡಿಕೊಂಡಿರುವ ಕುಂಬ್ರಿ ಬೇಸಾಯ ಇತ್ತಿಚಿನ ವರ್ಷಗಳಲ್ಲಿ ಮಾಡಲು ಸಾದ್ಯವಾಗದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಇಲ್ಲಿ ಹುಲಿ ಸಂರಕ್ಷಿತ ಪ್ರದೇಶ ಹೇಸರಿನಲ್ಲಿ ನಡೆಯುತ್ತಿರುವ ಅರಣ್ಯ ಇಲಾಖೆಯ ದಬ್ಬಾಳಿಕೆಯೂ ಕಾರಣ. ಇಲ್ಲಿನ ಮೂಲ ನಿವಾಸಿಗಳು ಅರಣ್ಯ,ವನ್ಯ ಜೀವಿಗಳನ್ನು ಉಳಿಸಿ ಸಂರಕ್ಷಿಸಿಟ್ಟಿದ್ದೆ ಇಂದು ಶಾಪವಾಗಿ ಇಲ್ಲಿನ ಜನರನ್ನು ಇಂದು ಪರಿತಪಿಸುವಂತೆ ಮಾಡುತ್ತಿದೆ.


ತಾಲೂಕಿನಲ್ಲಿ ಶೇ 20 ಕ್ಕೂ ಹೆಚ್ಚು ಜನರು ಇಂದಿಗೂ ಅನಕ್ಷರಸ್ಥರು. ಮರಾಠಿ ಶಾಲೆಯಲ್ಲಿ ಓದಿದ 30 ಶೇ ಕ್ಕಿಂತ ಹೆಚ್ಚು ಜನರಿಗೆ ಕನ್ನಡ ಭಾಷೆ ಓದುವುದೂ ಕಷ್ಟ. ಓದಿ ಅಕ್ಷರ ಕಲಿತ ಯುವ ಜನರಲ್ಲಿ ಬಹಳಷ್ಟು ಜನ ಇಂದು ಇಲ್ಲಿ ವ್ಯವಸಾಯ ಮಾಡದೇ ಉದ್ಯೋಗದ ಅನಿರ್ವಾರ್ಯತೆಗಾಗಿ ಪಕ್ಕದ ಗೊವಾ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಊರಿನಲ್ಲಿ ಇರುವಂತವರು ವಯಸ್ಸಾದ ಅನಕ್ಷರಸ್ಥ ಹಿರಿಯ ಜೀವಿಗಳು.ಹುಲಿ ಸಂರಕ್ಷಿತ ಪ್ರದೇಶ ಎಂಬ ಹೆಸರಿನಲ್ಲಿ ಅರಣ್ಯ,ವನ್ಯ ಪ್ರಾಣಿಗಳ ರಕ್ಷಣೆಯ ಸೋಗಿನಲ್ಲಿ ತಾಲೂಕಿನ ಮೂಲ ನಿವಾಸಿಗಳ ಮೇಲೆ ನಿರಂತರ ಕಿರುಕುಳಕ್ಕೆ ಹಲವು ಪ್ರಕರಣಗಳು ಸಾಕ್ಷಿಯಾಗಿದ್ದರೂ ಈ ತಿಳುವಳಿಕೆ ಜ್ಞಾನ ಇಲ್ಲದ ಜನರು ಇದನ್ನು ಪ್ರತಿಭಟಿಸುವಲ್ಲಿ ಹಿಂದೆ ಬೀಳುತ್ತಿದ್ದಾರೆ. ಇದರ ದುರುಪಯೋಗ ಪಡೆದ ಅರಣ್ಯ ಇಲಾಖೆಯವರು ತಾವು ಮಾಡಿದ್ದೆ ಕಾರ್ಯ,ಆಡಿದ್ದೆ ಆಟ ಎನ್ನುವ ರೀತಿ ಈ ಜನರ ಮೇಲೆ ವರ್ತಿಸುತ್ತಿದ್ದಾರೆ.

ವಂಶಪಾರಂಪರಿಕ ಬೇಸಾಯಕ್ಕೆ ಹಲವು ಅಡ್ಡಿ


ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಗಾಳ- ಕುಂಬಗಾಳ ಮತ್ತು ವಾಸ್ಪೋಡ ಊರಿನ ಜನರು ನಿರಂತವಾಗಿ ಇತ್ತಿಚಿನ ವರ್ಷದಲ್ಲಿ ಅರಣ್ಯ ಇಲಾಖೆಯವರಿಂದ ನಿರಂತರವಾಗಿ ತೊಂದರೆಗೆ ಒಳಗಾಗುತ್ತಿದ್ದಾರೆ. ಇಲ್ಲಿನ ವಾಸ್ಪೋಡ ದಲ್ಲಿ 10 ಕುಟುಂಬಗಳು ಇದ್ದು, ಇವರಿಗೆ ಇರುವ ಕಂದಾಯ ಜಮೀನು 14 ಎಕರೆಯಷ್ಟಿದೆ. ಇಲ್ಲಿ ಈ ಜನರು ಬೇಳೆಯುತ್ತಿರುವುದು ಮಳೆಗಾಲದಲ್ಲಿ ಭತ್ತದ ಒಂದು ಬೇಳೆ ಮಾತ್ರ. ವಂಶ ಪಾರಂಪರಿಕವಾಗಿ ಬೇಸಾಯ ಮಾಡಿಕೊಂಡ ಕುಂಬ್ರಿ ಜಮೀನಿನಲ್ಲಿ ರಾಗಿ ಬೇಳೆ ತೆಗೆಯಲು ವನ್ಯ ಪ್ರಾಣಿಗಳ ಕಾಟ ಹೆಚ್ಚಾಗಿದೆ.

ಹೀಗಾಗಿ ಇಲ್ಲಿನ ಬಹುತೇಕರು ಗೇರು,ಹಲಸು,ಮಾವು,ಪೇರಳ ಸೇರಿದಂತೆ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಈ ಕುಂಬ್ರಿ ಜಮೀನಿನಲ್ಲಿ ಬೇಳೆಸಿ ಪರೋಕ್ಷವಾಗಿ ಅರಣ್ಯವನ್ನು ಬೇಳೆಸುವ ಕಾರ್ಯದೊಂದಿಗೆ ತಮ್ಮ ದಿನ ನಿತ್ಯದ ಆದಾಯಕ್ಕಾಗಿ ಸಹಾಯ ಆಗಬಹುದು ಎಂದು ಬೇಳೆಸತೊಡಗಿದ್ದಾರೆ. ಇದು ಕಂಡ ಅರಣ್ಯ ಇಲಾಖೆಯ ಸಿಬ್ಬಂದಿಗಳು ಊರ ಜನರಿಗೆ ಹೊತ್ತಾಗದಂತೆ ಕದ್ದು ಬಂದು ಆಕ್ರಮವಾಗಿ ಇಲ್ಲಿನ ಕುಂಬ್ರಿ ಜಮೀನಿನಲ್ಲಿ ಬೆಳೆಸಿದ ಹಣ್ಣಿನ ದೊಡ್ಡ ಮರಗಳನ್ನು, ಚಿಕ್ಕ ಗಿಡಗಳನ್ನು ಕಡಿದು ನಾಶ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂಬುದು ಸ್ಥಳಿಯರ ಆರೋಪ.

ಇಲಾಖೆಗೊಂದು ಕಾನೂನು,ಜನರಿಗೊಂದು ಕಾನೂನು?

ಅಡಿಕೆ ತೋಟ ಹೊಂದಿರುವ ಶಿರಸಿ,ಯಲ್ಲಾಪುರ ಸೇರಿದಂತೆ ಬೇರೆ ತಾಲೂಕುಗಳಲ್ಲಿ ಒಂದು ಎಕರೆ ಅಡಿಕೆ ತೋಟಕ್ಕೆ ಇಂತಿಷ್ಟು ಎಂದು ಸಪ್ಪಿನ ಬೇಣವನ್ನು ಸರಕಾರ ನೀಡಿದೆ. ಆದರೆ ಜೊಯಿಡಾ ತಾಲೂಕಿನಲ್ಲಿ ಮಾತ್ರ ಹಿಂದಿನಿಂದಲೂ ಕುಂಬ್ರಿ ಬೇಸಾಯ ಮಾಡಿಕೊಂಡು ಬಂದಿರುವ ಜಮೀನು ದಾಖಲೆಯಲ್ಲಿ ಇದ್ದರೂ ಸಹ ಇಂದು ಅದರಲ್ಲಿ ರಾಗಿ ಹಣ್ಣಿನ ಗಿಡ ಮರಗಳನ್ನು ಬೇಳೆಸಲೂ ಅವಕಾಶ ನೀಡುತ್ತಿಲ್ಲ. ಅರಣ್ಯ ಇಲಾಖೆ ವಿವಿಧ ಅರಣ್ಯಿಕರಣ ಹೇಸರಿನಲ್ಲಿ ಈ ಹಿಂದೆಲ್ಲ ಹುಲಿ ಸಂರಕ್ಷಿತ ಪ್ರದೇಶದಲ್ಲೇ ಹಣ್ಣಿನ ಗಿಡ ನೆಟ್ಟು ಅರಣ್ಯ ಅಭಿವೃದ್ದಿ ಹೆಸರಿನಲ್ಲಿ ಲಕ್ಷಾಂತರ , ಕೋಟ್ಯಾಂತರ ಅನುಧಾನ ಸುರಿದು ಮಣ್ಣು ಪಾಲು ಮಾಡಿರುವುದಕ್ಕೆ ಇವರಿಗೆಅನುಮತಿ ಇದೆ.

ಕುಂಬಾರವಾಡಾ, ಕ್ಯಾಸಲ್ ರಾಕ್ ವನ್ಯ ಜೀವಿ ವಲಯದಲ್ಲಿ ನೈಸರ್ಗಿಕವಾಗಿ ಇರುವ ಹುಲ್ಲುಗಾವಲನ್ನು ಅರಣ್ಯ ಇಲಾಖೆಯೇ ಯಂತ್ರಗಳನ್ನು ಬಳಸಿ ಉಳುಮೆ ಮಾಡಿ ನಾಶ ಪಡಿಸಿ ಯಾವುದೋ ಹೋಸ ತಳಿಯ ಹುಲ್ಲನ್ನು ನೇಟ್ಟು ಬೇಳೆಸುವದಕ್ಕೂ ಇವರಿಗೆ ಅನುಮತಿ ಇದೆ. ಜೆಸಿಬಿ ಯಂತ ಬ್ರಹತ್ ಯಂತ್ರಗಳನ್ನು ಬಳಸಿ ದಟ್ಟ ಅರಣ್ಯದೊಳಗೆ ಕೇರೆ ನಿರ್ಮಾಣದ ಹೆಸರಿನಲ್ಲಿ ಲಕ್ಷಾಂತರ ಅನುದಾನವನ್ನು ಬಳಕೆ ಮಾಡಲೂ ಅವಕಾಶ ಇದೆ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಈ ಸ್ಟೋರಿಯ ವಿಡಿಯೋ ನೋಡಿ

ಆದರೆ ಇಲ್ಲಿನ ಜನರು ತಮ್ಮ ಕುಂಬ್ರಿ ಜಮೀನಿನಲ್ಲಿ ಹಣ್ಣಿನ ಗಿಡ ಬೇಳೆಸಿದರೆ, ಸಂಪರ್ಕಕ್ಕೆ ಇರುವ ಹಳೆಯ ರಸ್ತೆಯನ್ನು ಖಡಿಕರಣವೂ,ಅಭಿವೃದ್ದಿಯೋ ಮಾಡಲು ಮುಂದಾರೆ ಕಾನೂನಿನ ನೇಪದಲ್ಲಿ ಅರಣ್ಯ ಇಲಾಖೆ ಇಲ್ಲಿ ತೊಡಕನ್ನು ಉಂಟುಮಾಡುತ್ತದೆ.ಇದು ಇಲಾಖೆಗೊಂದು ಕಾನೂನು,ಜನರಿಗೊಂದು ಕಾನೂನು ಎನ್ನುವಂತಾಗಿದೆ.

ವಿಸ್ಮಯ ನ್ಯೂಸ್, ಜೋಯ್ಡಾ

Back to top button