Focus News
Trending

ಕುಮಟಾ ತಾಲೂಕಿನಲ್ಲಿ ಇಂದು 13 ಕರೊನಾ ಪಾಸಿಟಿವ್

[sliders_pack id=”1487″]

ಕುಮಟಾ : ತಾಲೂಕಿನಲ್ಲಿ ಇಂದು 13 ಜನರಲ್ಲಿ ಕರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ತಾಲೂಕಿನ ಗೋಕರ್ಣ, ಹಳ್ಕಾರ, ಅಳಕೋಡ, ಅಘನಾಶಿನಿ, ಬರ್ಗಿ, ಹಟ್ಟಿಕೇರಿ ಸೇರಿದಂತೆ ಪಟ್ಟಣವ್ಯಾಪ್ತಿಯಲ್ಲಿಯೂ ಸಹ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಗೋಕರ್ಣದ 35 ವರ್ಷದ ಪುರುಷ, 67 ವರ್ಷದ ವೃದ್ಧ, ಕೋಟಿತೀರ್ಥದ 32 ವರ್ಷದ ಪುರುಷ, ಬರ್ಗಿಯ 54 ವರ್ಷದ ಪುರುಷ, ಅಘನಾಶಿನಿಯ 67 ವರ್ಷದ ವೃದ್ಧ, ಅಳಕೋಡದ 72 ವರ್ಷದ ವೃದ್ಧ, ಹಳ್ಕಾರದ 21 ವರ್ಷದ ಯುವತಿ, 8 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.

ನವಗ್ರಾಮದ 42 ವರ್ಷದ ಮಹಿಳೆ, ಹಟ್ಟಿಕೇರಿಯ 72 ವರ್ಷದ ವೃದ್ಧೆ, 40 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಪಟ್ಟಣ ವ್ಯಾಪ್ತಿಯಲ್ಲಿನ ಮೂರುಕಟ್ಟೆಯ 50 ವರ್ಷದ ಮಹಿಳೆ, ಕುಮಟಾ ಪಟ್ಟಣದ 35 ವರ್ಷದ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ. ಇಂದು ತಾಲೂಕಿನಲ್ಲಿ 13 ಹೊಸ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,315 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button