
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಳ್ಳೆಯ ಉದ್ಯೋಗ ಪಡೆಯಲು ಹರಸಾಹಸ ಪಡಬೇಕಾಗಿದೆ. ಅದರಲ್ಲೂ ಸಂದರ್ಶನ (Interview) ಅತ್ಯಂತ ಮಹತ್ವದ್ದಾಗಿದೆ. ಕೇವಲ ವಿದ್ಯಾರ್ಹತೆ ಮಾತ್ರವಲ್ಲ, ನಿಮ್ಮ ಆತ್ಮವಿಶ್ವಾಸ, ಮಾತಿನ ಶೈಲಿ ಮತ್ತು ತಯಾರಿಯೇ ಯಶಸ್ಸನ್ನು ನಿರ್ಧರಿಸುತ್ತದೆ ಎಂದರೂ ತಪ್ಪಲ್ಲ.
ಕಂಪನಿಯ ಬಗ್ಗೆ ಮಾಹಿತಿ ಸಂಗ್ರಹಿಸಿ
ನೀವು ಸಂದರ್ಶನಕ್ಕಿoತ ಮುಂಚೆ ಯಾವ ಕಂಪೆನಿಗೆ ಹೋಗುತ್ತಿದ್ದೀರಿ. ಆ ಕಂಪನಿಯ ಇತಿಹಾಸ, ಕಾರ್ಯವೈಖರಿ ಮತ್ತು ಕೆಲಸದ ಕ್ಷೇತ್ರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಇದು ನಿಮ್ಮ ಆಸಕ್ತಿ ಮತ್ತು ಕೆಲಸದ ಗಂಭೀರತೆಯನ್ನು ಸಂದರ್ಶಕರಿಗೆ ತೋರಿಸುತ್ತದೆ.
ಆತ್ಮವಿಶ್ವಾಸದಿಂದ ಮಾತನಾಡಿ
ಸಂದರ್ಶನಕ್ಕೆ ತೆರಳಿದಾಗ ಆತ್ಮವಿಶ್ವಾಸ ಬಹಳ ಮುಖ್ಯ. ಮಾತನಾಡುವಾಗ ಕಣ್ಣಿನಲ್ಲಿ ಕಣ್ಣಿಟ್ಟು ಉತ್ತರ ಕೊಡಿ. ನಿಧಾನವಾಗಿ, ಸ್ಪಷ್ಟವಾಗಿ ಮಾತನಾಡಬೇಕು. ಇದು ಸಂದರ್ಶಕರನ್ನು ಇಂಪ್ರೆಸ್ ಮಾಡುತ್ತದೆ.
ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ತಯಾರಿ ಮಾಡಿಕೊಳ್ಳಿ
- ನಿಮ್ಮ ಬಗ್ಗೆ ತಿಳಿಸಿ
- ನಮ್ಮ ಕಂಪನಿಯಲ್ಲಿ ಕೆಲಸ ಮಾಡಲು ಯಾಕೆ ಬಯಸುತ್ತೀರಿ?”
- ಮುಂದಿನ 5 ವರ್ಷಗಳ ಗುರಿ ಏನು?
- ಇಂತಹ ಪ್ರಶ್ನೆಗಳಿಗೆ ಮುಂಚಿತವಾಗಿ ಉತ್ತರ ತಯಾರಿಸಿಕೊಳ್ಳಿ.
ಅನುಭವ ಮತ್ತು ಕೌಶಲ್ಯ ತಿಳಿಸಿ
ನಿಮ್ಮ project, internship, ಅಥವಾ ಕೆಲಸದ ಅನುಭವವನ್ನು short points ನಲ್ಲಿ ಹೇಳಿ. Practical examples ನೀಡಿದರೆ ಹೆಚ್ಚು ಪ್ರಭಾವ ಬೀರುತ್ತದೆ.
ಸಮಯ ಪಾಲನೆ ಮಾಡಿ
ಸಂದರ್ಶನ ಸ್ಥಳಕ್ಕೆ ಕನಿಷ್ಠ 15 ನಿಮಿಷ ಮುಂಚೆಯೇ ತಲುಪಿರಿ. ಇದು ನಿಮ್ಮ ಹೊಣೆಗಾರಿಕೆ ಮತ್ತು ಸಮಯದ ಮೇಲಿನ ಗೌರವವನ್ನು ತೋರಿಸುತ್ತದೆ.
ಹೀಗೆ ಉದ್ಯೋಗ ಸಂದರ್ಶನದಲ್ಲಿ ಯಶಸ್ವಿಯಾಗಲು ಆತ್ಮವಿಶ್ವಾಸ, ಸರಿಯಾದ ತಯಾರಿ ಮತ್ತು ವ್ಯಕ್ತಿತ್ವ ಬಹಳ ಮುಖ್ಯ. ಈ ಟಿಪ್ಸ್ ಪಾಲಿಸಿದರೆ ನೀವು ಮುಂದಿನ ಸಂದರ್ಶನದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್