ಭಟ್ಕಳ: ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದ ಮಂಗವೊಂದು ಮಾನವನೊಂದಿಗೆ ಉತ್ತಮ ಒಡನಾಟ ಹೊಂದಿದ್ದು ಸ್ಥಳಿಯ ಮನೆಗಳಿಗೆ ತೆರಳಿ ಕೊಟ್ಟ ಆಹಾರ ಸೇವಿಸುತ್ತಾ ದಿನಕಳೆಯುತ್ತಿರುವ ಘಟನೆ ಭಟ್ಕಳ ಆಸರಕೇರಿಯ ನಿಚ್ಛಲಮಕ್ಕಿ ದೇವಸ್ಥಾನದ ಬಳಿಯಲ್ಲಿ ನಡೆದಿದೆ.
ಕಳೆದ ಒಂದು ತಿಂಗಳ ಹಿಂದೆ ಕಪ್ಪು ಮೂತಿಯ ಲಂಗೂರ್ ಜಾತಿಯ ಮಂಗವೊಂದು ನಾಡಿಗೆ ಬಂದಿದೆ. ಗುಂಪಿನಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಿರಬಹುದು ಎನ್ನುವದು ಸ್ಥಳೀಯರ ಅಭಿಪ್ರಾಯ. ಅಂದಿನಿಂದ ಇಲ್ಲಿನ ಸ್ಥಳೀಯರ ಜೊತೆ ಉತ್ತಮ ಒಡನಾಟ ಹೊಂದಿದ ವಾನರ ಪ್ರತಿದಿನ ಸ್ಥಳೀಯ ಮನೆಗೆ ತೆರಳಿ ಅವರು ಕೊಟ್ಟ ಆಹಾರ ಸೇವಿಸುತ್ತಿದೆ. ಇಲ್ಲಿನ ಮಕ್ಕಳಂತೂ ಮಂಗನೊಂದಿಗೆ ಆಟವಾಡುವಾಡುವದು, ಅದಕ್ಕೆ ಹಣ್ಣು ಹಂಪಲ ತಿನ್ನಿಸುವದು ಸೇರಿ ಅದರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಈ ಕುರಿತ ಒಂದು ವಿಡಿಯೋ ಸ್ಟೋರಿ ಇಲ್ಲಿದೆ ನೋಡಿ.