Follow Us On

Google News
Focus News

ಗ್ರಾಮೀಣ ಸೇವಾ ಸಹಕಾರಿ ಸಂಘ ಬರಗದ್ದೆಯ ಚುನಾವಣೆ: ನಾಳೆಯಿಂದ ನಾಮಪತ್ರ ಸಲ್ಲಿಕೆ

ಅಕ್ಟೋಬರ್ 24ರ ಶನಿವಾರ ಮತದಾನ
ಅಂದೇ ಫಲಿತಾಂಶ ಘೋಷಣೆ

ಕುಮಟಾ: ತಾಲೂಕಿನ ಗ್ರಾಮೀಣ ಸೇವಾ ಸಹಕಾರಿ ಸಂಘ ಬರಗದ್ದೆಯ ಆಡಳಿತ ಮಂಡಳಿಗೆ ಮುಂದಿನ ಐದುವರ್ಷಗಳ ಅವಧಿಗೆ ಚುನಾವಣೆ ಸಹಕಾರಿ ಸಂಘಗಳ ನಿಯಮಾವಳಿ ಪ್ರಕಾರ ಘೋಷಣೆಯಾಗಿದೆ. ಅಕ್ಟೋಬರ್ 9 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅಕ್ಟೋಬರ್ 15 ರಂದು ನಾಮಪತ್ರ ಸಲ್ಲಿಕೆ ಕೊನೆಯದಿನವಾಗಿದೆ. ಅಕ್ಟೋಬರ್ 16 ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಪರಿಶೀಲನೆ ನಡೆಯಲಿದೆ. ಅಂದೇ ಅರ್ಹತೆ ಪಡೆದ ನಾಮಿನೇಷನ್ ಪಟ್ಟಿಯನ್ನು ಪ್ರಕಟಿಸಲಾಗುವುದು.

ಅಕ್ಟೋಬರ್ 17 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅಕ್ಟೋರ್ 17 ರಂದೇ ಅರ್ಹತೆ ಪಡೆದವರ ಅಂತಿಮಪಟ್ಟಿಯನ್ನು ರಿಟರ್ನಿಂಗ್ ಅಧಿಕಾರಿಗಳು ಸಂಘದ ಕಚೇರಿಯಲ್ಲಿ ಪ್ರಕಟಿಸಲಿದ್ದಾರೆ. ಅಕ್ಟೋಬರ್ 24ರ ಶನಿವಾರದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ವಿವರವಾದ ಪ್ರಕಟಣೆಯನ್ನು ಈ ಕೆಳಗೆ ಲಗತ್ತಿಸಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button