Uttara Kannada
Trending

ತಿಂಡಿಡಬ್ಬ ತೆಗೆಯುವಾಗ ಕಚ್ಚಿದ ನಾಗರಹಾವು

ಭಟ್ಕಳದಲ್ಲಿ ಇಬ್ಬರಿಗೆ ವಿಷಪೂರಿತ ಹಾವು ಕಡಿತ
ಹಾವು ಕಡಿದ ಬಾಲಕ-ಬಾಲಕಿಯ ರಕ್ಷಣೆ

[sliders_pack id=”1487″]

ಭಟ್ಕಳ: ತಾಲೂಕಿನಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ವಿಷಪೂರಿತ ಹಾವು ಕಚ್ಚಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳನ್ನು ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ, ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಮಾರುಕೇರಿಯ ಭರತ್ ಎಸ್ ನಾಯ್ಕ ಎಂಬಾತನಿಗೆ ಮನೆಯಲ್ಲಿ ಹಾವು ಕಚ್ಚಿತ್ತು. ಮನೆಯವರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈತನಿಗೆ ಮನೆಯೊಳಗಿಟ್ಟಿದ್ದ ತಿಂಡಿಡಬ್ಬ ತೆಗೆಯುವಾಗ ನಾಗರಹಾವು ಕಚ್ಚಿತ್ತು.

ಇನ್ನೊಂದು ಪ್ರಕರಣದಲ್ಲಿ ತಾಲೂಕಿನ ವೆಂಟಕಾಪುರ ಗ್ರಾಮದ ಶ್ರೇಯಾ ಎನ್ನುವ ನಾಲ್ಕು ವರ್ಷದ ಯುವತಿಯ ಕೈಗೆ ಹಾವು ಕಚ್ಚಿತ್ತು. ಕೂಡಲೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಮನೆಯವರು ಸೇರಿದ್ದಾರೆ. ಈ ವೇಳೆ ಜೀವಂತ ಹಾವನ್ನೂ ಹಿಡಿದು ಆಸ್ಪತ್ರೆಗೆ ಕರೆತಂದಿದ್ದರು. ಇದರಿಂದ ವೈದ್ಯರಿಗೆ ಚಿಕಿತ್ಸೆ ಸುಲಭವಾಗಿದೆ. ಈಕೆಯನ್ನೂ ಕೂಡಾ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಭಟ್ಕಳ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button