Focus News
Trending

ಆಟೋ ಓಡಿಸಿದ ಶಾಸಕ ಸುನೀಲ್ ನಾಯ್ಕ!

ಭಟ್ಕಳ: ತನ್ನ ಅಭಿಮಾನಿಯ ಆಸೆಯಂತೆ ಹೊಸ ಆಟೋ ರಿಕ್ಷಾವನ್ನು ಓಡಿಸಿ ಅಭಿಮಾನಿ ಆಸೆ ಪೂರೈಸಿದ ಘಟನೆ ಶಾಸಕ ಸುನೀಲ ನಾಯ್ಕ ಅವರ ಕಛೇರಿಯ ಬಳಿ ಗುರುವಾರ ನಡೆದಿದೆ. ತಾಲೂಕಿನ ಶಿರಾಲಿಯ ಆಟೋ ಚಾಲಕನೊಬ್ಬ ತಾನು ಖರೀದಿಸಿದ ಹೊಸ ಆಟೋ ರಿಕ್ಷಾವನ್ನು ಮೊದಲು ತನ್ನ ನೆಚ್ಚಿನ ಶಾಸಕರಾದ ಸುನೀಲ ನಾಯ್ಕ ಇವರಿಂದ ಓಡಿಸಿಬೇಕೆಂಬ ಆಸೆಹೊಂದಿದ್ದ. ಇಂದು ಖರೀದಿಸಿದ ಆಟೋವನ್ನು ಪ್ರಥಮವಾಗಿ ಶಾಸಕ ಸುನೀಲ್ ನಾಯ್ಕರಿಂದಲೇ ಓಡಿಸಿ ತನ್ನ ಆಸೆ ಪೂರೈಸಿಕೊಂಡಿದ್ದಾನೆ ಈ ಅಭಿಮಾನಿ.


ಶಿರಾಲಿಯ ಆಟೋ ಚಾಲಕ ವೆಂಕಟೇಶ ನಾಯ್ಕ ಎನ್ನುವರಿಗೆ ಸೇರಿದ ಆಟೋ ಇದಾಗಿದ್ದು ಇಂದು ಬೆಳಿಗ್ಗೆ ಹೊಸ ಆಟೋ ಖರೀದಿಸಿ ಆಟೋ ರಿಕ್ಷಾವನ್ನು ಶಾಸಕರ ಕಛೇರಿಯ ಬಳಿ ತಂದು ಅರವಿಂದಲೇ ಮೊದಲು ಚಾಲನೆ ನೀಡಿ ನಂತರ ಎಂದಿನoತೆ ತನ್ನ ಆಟೋ ಬಾಡಿಗೆಗೆ ತೆರಳಿದ್ದಾನೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ನೋಡಿ


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button