Follow Us On

Google News
Focus News
Trending

ಉತ್ತರ ಕನ್ನಡದಲ್ಲಿ 170 ಕೇಸ್ ದಾಖಲು: ನಾಲ್ವರ ಸಾವು

99 ಮಂದಿ ಗುಣಮುಖರಾಗಿ ಬಿಡುಗಡೆ
ಸೋಂಕಿಗೆ ನಾಲ್ವರು ಬಲಿ
ಕುಮಟಾದಲ್ಲಿ ಇಬ್ಬರು, ಹೊನ್ನಾವರದಲ್ಲಿ ಓರ್ವ ಸಾವು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 170 ಕರೊನಾ ಕೇಸ್ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 11,633ಕ್ಕೆ ಏರಿಕೆಯಾಗಿದೆ. ಇದರಲ್ಲಿ 10,185 ಮಂದಿ ಗುಣಮುಖರಾಗಿದ್ದಾರೆ. 1,303 ಸಕ್ರೀಯ ಕೇಸ್ ಗಳಿವೆ.

ಜಿಲ್ಲೆಯಲ್ಲಿಂದು ಕರೊನಾದಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 145ಕ್ಕೆ ಏರಿಕೆಯಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರ 9, ಅಂಕೋಲಾ 4, ಕುಮಟಾ 35, ಹೊನ್ನಾವರ 20, ಮುಂಡಗೋಡ 73, ಯಲ್ಲಾಪುರ 13, ಶಿರಸಿ 9, ಸಿದ್ದಾಪುರದಲ್ಲಿ 6 ಕೇಸ್ ದಾಖಲಾಗಿದೆ.

ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 99 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕುಮಟಾ 21, ಕಾರವಾರ 13, ಹೊನ್ನಾವರ 41, ಶಿರಸಿ 14, ಸಿದ್ದಾಪುರ 1, ಹಳಿಯಾಳ 2, ಮುಂಡಗೋಡಿನಲ್ಲಿ 7 ಮಂದಿ ಬಿಡುಗಡೆಯಾಗಿದ್ದಾರೆ.

ಅಂಕೋಲಾದಲ್ಲಿoದು 4 ಕೊವಿಡ್ ಕೇಸ್ : ಗುಣಮುಖ15 : ಸಕ್ರಿಯ74

ಅಂಕೋಲಾ : ತಾಲೂಕಿನಲ್ಲಿ ಬುಧವಾರ ಒಟ್ಟೂ 4 ಹೊಸ ಕೊವಿಡ್ ಕೇಸ್‌ಗಳು ದಾಖಲಾಗಿದೆ. ಗಾಬಿತಕೇಣಿ, ಕಾಕರಮಠ, ಮಠಾಕೇರಿ ಮತ್ತು ಕೆ.ಎಲ್.ಇ ಹತ್ತಿರದ ಪ್ರದೇಶಗಳಲ್ಲಿ ತಲಾ 1ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇಂದು ಸೋಂಕು ಮುಕ್ತರಾದ 15ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್ ನಲ್ಲಿರುವ 53 ಮಂದಿ ಸಹಿತ ಒಟ್ಟೂ 74ಸಕ್ರಿಯ ಪ್ರಕರಣಗಳಿವೆ.

ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ತಾಲೂಕಾಸ್ಪತ್ರೆಯಲ್ಲಿ ಒಟ್ಟಾರೆಯಾಗಿ ರ‍್ಯಾಟ್ ಹಾಗೂ 242 ಆರ್.ಟಿ.ಪಿ.ಸಿಆರ್ ಸೇರಿದಂತೆ 246ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.

ಯಲ್ಲಾಪುರದಲ್ಲಿ ಒಂದು ಕೇಸ್

ಯಲ್ಲಾಪುರ: ತಾಲೂಕಿನಲ್ಲಿ ಇಂದು ಒಬ್ಬರಿಗೆ ಕೊರೊನಾ ಸೋಂಕು ಧೃಢಪಟ್ಟಿದೆ.ಕಾಳಮ್ಮನಗರದ ಓರ್ವರಿಗೆ ಸೋಂಕು ತಗುಲಿದೆ. ಇದೇ ವೇಳೆ ಇಂದು 9 ಮಂದಿ ಗುಣಮುಖರಾಗಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button
Idagunji Mahaganapati Chandavar Hanuman